ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲರ ಫೇವರೆಟ್ ಬಿಗ್ ಬಾಸ್ ಸೀಸನ್ 10 ಇನ್ನೇನು ಕೆಲವೇ ದಿನದಲ್ಲಿ ನಿಮ್ಮ ಮುಂದೆ ಬರಲಿದೆ. ಹೌದು, ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ ಬಿಗ್‌ಬಾಸ್ ಟೀಂ ಶೋಗೆ ಪ್ರೋಮೋ ತಯಾರಾಗ್ತಿದೆ ಎಂದು ಹೇಳಿತ್ತು. ಸಿನಿಮಾ ಶೂಟಿಂಗ್ ಮಧ್ಯೆಯೂ ಸುದೀಪ್ ಪ್ರೊಮೊ ಶೂಟ್ ಮಾಡ್ತಿದ್ದಾರೆ.
ಇನ್ನು ಸೆ.15ರಂದು ಬಿಗ್ ಬಾಸ್ ಯಾವಾಗಿನಿಂದ ಆರಂಭವಾಗಬಹುದು ಎನ್ನುವ ವಿಷಯ ಹೊರಬೀಳಲಿದೆ. ಈ ಬಾರಿ ಯಾರೆಲ್ಲಾ ಬರಲಿದ್ದಾರೆ ಎನ್ನುವ ಸಾಕಷ್ಟು ಲಿಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಈ ಬಾರಿ ಸುನೀಲ್, ನಮ್ರತಾ, ರೂಪಾ ರಾಯಪ್ಪ ಕೂಡ ಸ್ಪರ್ಧಿಯಾಗುವ ಸಾಧ್ಯತೆ ಇದೆ.