ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಚ್ಡಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮಾಜಿ ಶಾಸಕಿ ಹಾಗೂ ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಮಾತನಾಡಿದ್ದಾರೆ.
ಕುಮಾರಸ್ವಾಮಿಯವರು ಆರಾಮವಾಗಿ ಇದ್ದಾರೆ. ಯಾರೂ ಕೂಡ ಊಹಾಪೋಹದ ಸುದ್ದಿಗಳನ್ನ ಹರಡಬೇಡಿ ಹಾಗೆಯೇ ರಾಜ್ಯದ ಜನತೆ ಗಾಬರಿಯಾಗೋದು ಬೇಡ. ಯಾರೂ ಸಹ ಆತಂಕಪಡೋದು ಬೇಡ. ನಾಳೆಯೇ ಡಿಸ್ಚಾರ್ಜ್ ಮಾಡ್ತೇವೆ ಎಂದು ವೈದ್ಯರು ಹೇಳಿದ್ದರು. ಆದರೆ, ನಾನೇ ಅವರಿಗೆ ಬೇಡ ಎಂದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ತಕ್ಷಣವೇ ಡಿಸ್ಚಾರ್ಜ್ ಮಾಡೋದು ಬೇಡ ಎಂದು ನಾನೇ ಹೇಳಿದ್ದೇನೆ. ಡಿಸ್ಚಾರ್ಜ್ ಆದ್ರೇ ಮತ್ತೆ ಓಡಾಟ ಶುರು ಮಾಡಿಕೊಳ್ಳುತ್ತಾರೆ. ಅವರು ತುಂಬಾ ಆರಾಮವಾಗಿ ಇದ್ದಾರೆ. ಸುಳ್ಳುಸುದ್ದಿ ಹರಡೋದು ಬೇಡ. ಎಲ್ಲಾರ ಜೊತೆ ಆರಾಮವಾಗಿ ಮಾತನಾಡುತ್ತಿದ್ದಾರೆ. ಶುಕ್ರವಾರ ಬೆಳಿಗ್ಗೆ ಡಿಶ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಬುಧವಾರ ಮುಂಜಾನೆ ಮಲಗಿದ್ದ ಸಮಯದಲ್ಲಿಯೇ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣಕ್ಕೆ ಎಚ್ಡಿ ಕುಮಾರಸ್ವಾಮಿ ಅವರನ್ನು 3.45ರ ವೇಳೆಗೆ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.