ಅಕ್ರಮ ಕಂಟ್ರಿ ಪಿಸ್ತೂಲ್: ಆರೋಪಿ ಬಂಧನ, ಜೀವಂತ ಗುಂಡು ಜಪ್ತಿ

ಹೊಸದಿಗಂತ ವರದಿ, ವಿಜಯಪುರ:

ಅಕ್ರಮ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡು ತಿರುಗುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, ಕಂಟ್ರಿ ಪಿಸ್ತೂಲ್, ಜೀವಂತ ಗುಂಡು ಜಪ್ತಿ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಬೇವನೂರ ಬಳಿ ನಡೆದಿದೆ.

ಚಡಚಣದ ದೇವರ ನಿಂಬರಗಿ ಗ್ರಾಮದ ಪ್ರಶಾಂತ ನಾವಿ ಬಂಧಿತ ಆರೋಪಿ.

ಬಂಧಿತ ಆರೋಪಿ ಇಂಡಿಯಿಂದ ಚಿಕ್ಕಬೇವನೂರ ಕಡೆಗೆ ಹೋಗುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ, ಪಿಎಸ್ಐ ಸೋಮೇಶ ಗೆಜ್ಜಿ ನೇತೃತ್ವದಲ್ಲಿ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಒಂದು ಕಂಟ್ರಿ ಪಿಸ್ತೂಲ್, ಏಳು ಜೀವಂತ ಗುಂಡು, ಒಂದು ಮ್ಯಾಗ್ಜಿನ್ ವಶಕ್ಕೆ ಪಡೆಯಲಾಗಿದೆ.

ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here