ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯ್‌ಪುರದಲ್ಲಿ ಇಬ್ಬರು ಯುವತಿಯರ ಮೇಲೆ 10 ಕ್ರೂರಿಗಳು ಅತ್ಯಾಚಾರ ಎಸಗಿದ್ದಾರೆ.
20 ವರ್ಷ ದಾಟಿಲ್ಲದ ಇಬ್ಬರು ಯುವತಿಯರು ರಕ್ಷಾಬಂಧನ ಆಚರಿಸಿ ವಾಪಾಸಾಗುತ್ತಿದ್ದರು. ಈ ವೇಳೆ ಹಸೌದ್ ಪ್ರದೇಶದ ಹಳ್ಳಿಯ ಬಳಿ 10 ಮಂದಿ ಆರೋಪಿಗಳು ಯುವತಿಯರನ್ನು ಅಡ್ಡಿಗಟ್ಟಿ ಕಿಡ್ನಾಪ್ ಮಾಡಿದ್ದಾರೆ.
ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ದುಡ್ಡು, ಬಂಗಾರ ಹಾಗೂ ಫೋನ್ ಕದ್ದು ಪರಾರಿಯಾಗಿದ್ದಾರೆ. ಯುವತಿಯರ ಜೊತೆ ಸ್ನೇಹಿತನೊಬ್ಬ ಇದ್ದು ಆತನಿಗೆ ಥಳಿಸಿ ಪರಾರಿಯಾಗಿದ್ದಾರೆ.
ಯುವತಿಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ 10 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.