ಹೊಸದಿಗಂತ ವರದಿ ಕಡಬ
ಕಡಬ ಪೇಟೆಯಲ್ಲಿ ಇಂದು (ಶನಿವಾರ ) ಬೆಳಗ್ಗೆ ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವೊಂದನ್ನು ಪವರ್‌ಮ್ಯಾನ್ ಒಬ್ಬರು ರಕ್ಷಣೆ ಮಾಡಿ ಮಾನವೀಯತೆಯ ಮಾಡಿದ ಘಟನೆ ನಡೆದಿದೆ.
ಕಡಬ ಸಿಟಿ ಫೀಡರ್ ಪವರ್‌ಮ್ಯಾನ್ ಆಗಿರುವ ಪಿ.ಜೆ. ಗುರುಮೂರ್ತಿ ಎಂಬವರು ಪಾರಿವಾಳವನ್ನು ರಕ್ಷಣೆ ಮಾಡಿ ಮಾನವೀಯತೆ ತೋರಿಸಿದವರು.
ಇಂದು ಬೆಳಗ್ಗೆ ಕಡಬ ಪೇಟೆಯಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲ ಪಾರಿವಾಳವೊಂದರ ಕಾಲಿಗೆ ಪ್ಲಾಸ್ಟಿಕ್ ಹಗ್ಗವೊಂದು ತಗುಲಿ ನಂತರದಲ್ಲಿ ಆ ಪಾರಿವಾಳ ವಿದ್ಯುತ್ ತಂತಿಯಲ್ಲಿ ಸಿಲುಕಿತ್ತು . ಈ ವೇಳೆ ಪ್ಲಾಸ್ಟಿಕ್ ಹಗ್ಗ ಪಾರಿವಾಳದ ಕಾಲಿಗೆ ಸುತ್ತಿ ವಿದ್ಯುತ್ ತಂತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿತ್ತು.ತಕ್ಷಣ ಸ್ಥಳೀಯರು ಪವರ್ ಮ್ಯಾನ್ ಅವರ ಗಮನಕ್ಕೆ ತಂದರು.ತಕ್ಷಣ ವಿದ್ಯುತ್ ಸಂಪರ್ಕ ಬಂದ್ ಮಾಡಿ ಪವರ್‌ಮ್ಯಾನ್ ಗುರುಮೂರ್ತಿ ಅವರು ಸ್ಥಳಕ್ಕೆ ಬಂದು ಕಂಬವೇರಿ ಬಾಯಿಂದಲೇ ಕಚ್ಚಿ ಹಿಡಿದುಕೊಂಡು ಪಾರಿವಾಳವನ್ನು ರಕ್ಷಣೆ ಮಾಡಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದರು.ಸ್ಥಳೀಯ ರಾದ ಗೋಪಾಲ್ ನಾಯಕ್ ಮೇಲಿನಮನೆ, ನಾಗೇಶ್ ಇತರರು ಸಹಕರಿಸಿದರು.