ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನಲ್ಲಿ ಮತ್ತೆ ಆಫ್ರಿಕನ್ ಹಂದಿಜ್ವರ ವ್ಯಾಪಕವಾಗಿದ್ದು, ಲಖಿಂಪುರದಲ್ಲಿ 1000 ಹಂದಿಗಳನ್ನು ಕೊಲ್ಲಲಾಗಿದೆ.
ಜ್ವರ ಹರಡದಂತೆ ತಡೆಯಲು 1000 ಹಂದಿಗಳನ್ನು ಕೊಲ್ಲಲಾಗಿದೆ. ವೈದ್ಯರ ತಂಡವು ವಿದ್ಯುತ್ ಆಘಾತ ನೀಡಿ 1000ಕ್ಕೂ ಹೆಚ್ಚು ಹಂದಿಗಳನ್ನು ಹತ್ಯೆ ಮಾಡಿದೆ ಎನ್ನಲಾಗಿದೆ.
ಈ ವರ್ಷದ ಆರಂಭದಲ್ಲೇ ಹಂದಿಜ್ವರದ ಒಂದೊಂದೆ ಪ್ರಕರಣಗಳು ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅಸ್ಸಾಂ ಸರ್ಕಾರ ಇತರ ರಾಜ್ಯದ ಕೋಳಿ ಹಾಗೂ ಹಂದಿಗಳ ಪ್ರವೇಶವನ್ನು ನಿಷೇಧ ಮಾಡಿತ್ತು.