Tuesday, October 3, 2023

Latest Posts

ಸೆ. 22 ರಂದು ಮತ್ತೆ ಸಿಗೋಣ: ಭಾರತಕ್ಕೆ ಗುಡ್‌ನೈಟ್‌ ಹೇಳಿದ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ 14 ದಿನಗಳಿಂದ ಚಂದ್ರನ ನೆಲದಲ್ಲಿ ಪರಿಶೋಧನೆಯಲ್ಲಿ ತೊಡಗಿಕೊಂಡಿದ್ದ ಚಂದ್ರಯಾನ-3ಯ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಭಾರತಕ್ಕೆ ಗುಡ್‌ನೈಟ್‌ ಹೇಳಿದೆ.

ಈ ಬಗ್ಗೆ ಇಸ್ರೋ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭೂಮಿಗೆ ಗುಡ್‌ನೈಟ್‌ ಹೇಳುವ ಮುನ್ನ ವಿಕ್ರಮ್‌ ಲ್ಯಾಂಡರ್‌ ಚಂದ್ರನ ನೆಲದಲ್ಲಿ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಶಿವಶಕ್ತಿ ಪಾಯಿಂಟ್‌ಯಿಂದ ಇಂದು 40 ಸೆಂಟಿಮೀಟರ್‌ ಹಾರಾಟ ನಡೆಸಿದ ವಿಕ್ರಮ್ ಲ್ಯಾಂಡರ್‌ ತಾನಿಂದ ಸ್ಥಳದಿಂದ 40 ಸೆಂಟಿಮೀಟರ್‌ ಪಕ್ಕ ಸರಿದಿದೆ. ಅ ಮೂಲಕ ಚಂದ್ರನ ನೆಲದಲ್ಲಿ 2ನೇ ಬಾರಿಗೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಇದರ ಬೆನ್ನಲ್ಲಿಯೇ ಶಿವಶಕ್ತಿ ಪಾಯಿಂಟ್‌ ಹಾಗೂ ಹೊಸ ಸ್ಥಳದ ಚಿತ್ರಗಳನ್ನು ಹಂಚಿಕೊಂಡಿರುವ ಇಸ್ರೋ, ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಎಬ್ಬಿಸುವ ಕಾರ್ಯ ಸೆಪ್ಟೆಂಬರ್‌ 22 ರಂದು ನಡೆಯಲಿದೆ ಎಂದು ಮಾಹಿತಿ ನೀಡಿದೆ.

‘ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಚಂದ್ರನ ನೆಲದ ಮೇಲೆ ವಿಕ್ರಮ್‌ ಲ್ಯಾಂಡರ್‌ ಸ್ಲೀಪ್‌ ಮೋಡ್‌ಗೆ ಹೋಗಿದೆ. ಅದರಕ್ಕೂ ಮುನ್ನ ಚಾಸ್ಟೆ, ರಂಭಾ-ಎಲ್‌ಪಿ ಮತ್ತು ಇಲ್ಸಾ ಪೇಲೋಡ್‌ಗಳು ವಿಕ್ರಮ್‌ ಲ್ಯಾಂಡರ್‌ ನಿಂತ ಹೊಸ ಸ್ಥಳದಲ್ಲಿ ತನ್ನ ಪ್ರಯೋಗಗಳನ್ನು ನಡೆಸಿದೆ. ಇವುಗಳು ಸಂಗ್ರಹಿಸಿದ ಡೇಟಾವನ್ನು ಭೂಮಿಯಲ್ಲಿ ಸ್ವೀಕಾರ ಮಾಡಲಾಗಿದೆ. ಅದರ ನಂತರ ಎಲ್ಲಾ ಪೇಲೋಡ್‌ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ. ಲ್ಯಾಂಡರ್ ರಿಸೀವರ್‌ಗಳನ್ನು ಆನ್‌ನಲ್ಲಿ ಇರಿಸಲಾಗಿದೆ. ಸೋಲಾರ್‌ ಪವರ್‌ ಮುಗಿದು ಬ್ಯಾಟರಿ ಖಾಲಿಯಾದ ಮೇಲೆ ಪ್ರಗ್ಯಾನ್‌ ಪಕ್ಕದಲ್ಲೇ ವಿಕ್ರಮ್‌ ನಿದ್ರಿಸುತ್ತಾನೆ. ಸೆಪ್ಟೆಂಬರ್‌ 22 ರಂದು ಇವೆರಡನ್ನೂ ಎಬ್ಬಿಸುವ ಕೆಲಸ ಮಾಡಲಾಗುತ್ತದೆ. ಹಾಪ್‌ (2ನೇ ಸಾಫ್ಟ್‌ ಲ್ಯಾಂಡಿಂಗ್‌) ಮೊದಲು ಮತ್ತು ನಂತರದ ಚಿತ್ರಗಳು ಇಲ್ಲಿವೆ’ ಎಂದು ಇಸ್ರೋ ಚಿತ್ರಗಳನ್ನು ಹಂಚಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!