ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಊರಿಂದ ಹೊರಗೆ ಹೋಗುವಾಗ ಎಲ್ಲವನ್ನೂ ಸರಿಯಾಗಿ ಜೋಡಿಸಿ, ಪ್ಯಾಕ್ ಮಾಡಿ ಹೋಗುತ್ತೇವೆ. ವಾಡ್‌ರೋಬ್ ಭದ್ರಪಡಿಸಿ, ಅಡುಗೆ ಮನೆ ಸಹಿತ ಎಲ್ಲವನ್ನೂ ಸ್ವಚ್ಛ ಮಾಡುತ್ತೇವೆ. ಜೊತೆಗೆ ಎಲ್ಲಾ ಬೀಗಗಳು ಲಾಕ್ ಆಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುತ್ತೇವೆ. ಈ ಸಮಯದಲ್ಲಿ ಅಳಿದು-ಉಳಿದು ತರಕಾರಿ, ಹಣ್ಣು-ಹಂಪಲು ನಾನಾ ಬಗೆಯ ತಿಂಡಿಗಳನ್ನು ಫ್ರಿಡ್ಜ್‌ಗೆ ಸೇರಿಸಿ ಹೋಗೋದು ಕಾಮನ್. ಹೆಚ್ಚಿನ ದಿನ ಮನೆಯಲ್ಲಿ ಇರುವುದಿಲ್ಲ ಅಂತಾದರೆ, ಕೆಲವು ವಸ್ತುಗಳನ್ನು ಹೊರತೆಗೆಯುವುದು ಉತ್ತಮ. ಅವು ಯಾವುವೆಂದು ನೋಡೋಣ.
- ನೀವು ತುಂಬಾ ದಿನ ಹೊರಗೆ ಹೋಗುತ್ತಿದ್ದರೆ, ಫ್ರಿಜ್ ಅನ್ನು ಸಹ ಸ್ವಚ್ಛಗೊಳಿಸಿ. ಎಲ್ಲಾ ಫ್ರಿಜ್ ಕಪಾಟನ್ನು ನೀರು ಅಥವಾ ವಿನೆಗರ್‌ನಿಂದ ಸ್ವಚ್ಛಗೊಳಿಸಿ.
- ಅದರಲ್ಲಿ ಕೊಳೆಯುವ ವಸ್ತುಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಹಾಗೆ ಬಂದರೆ ಫ್ರಿಡ್ಜ್ ಕೆಡದೆ, ವಾಸನೆ ಬರದಂತೆ ಫ್ರೆಶ್ ಆಗಿರುತ್ತದೆ.
- ಹೋಗುವ ಮುನ್ನ ಫ್ರಿಡ್ಜ್ ನಲ್ಲಿ ತರಕಾರಿ, ಹಾಲು, ಮೊಸರು ಇತ್ಯಾದಿಗಳಿದ್ದರೆ ತಕ್ಷಣ ತೆಗೆದು ತಿನ್ನಿ. ಏಕೆಂದರೆ ವಾಪಸ್ ಬರುವಷ್ಟರಲ್ಲಿ ಅವು ಕೊಳೆತು ಇಡೀ ಫ್ರಿಡ್ಜ್ ಕೆಟ್ಟ ವಾಸನೆ ಬರುತ್ತದೆ ಮತ್ತು ಹಾಳಾಗುತ್ತದೆ.
- ಸಾಂಬಾರ್, ಗೊಜ್ಜು, ಚಟ್ನಿ ಮುಂತಾದ ಪದಾರ್ಥಗಳನ್ನೂ ಫ್ರಿಡ್ಜ್‌ನಲ್ಲಿಡಬೇಡಿ
- ಕೊತ್ತಂಬರಿ ಸೊಪ್ಪು, ವಿವಿಧ ರೀತಿಯ ಸೊಪ್ಪುಗಳಿದ್ದರೆ, ಅವುಗಳಲ್ಲಿ ತೇವಾಂಶ ಇಲ್ಲದಿರುವುದನ್ನು ನೋಡಿ. ಟಿಶ್ಯೂ ಪೇಪರ್ ಇಟ್ಟು ಅದರ ಮೇಲೆ ಸೊಪ್ಪು ಇಡುವುದು ಸೂಕ್ತ