ವಿಶ್ವಕಪ್ ತಂಡದಲ್ಲಿ ಸ್ಯಾಮ್ಸನ್, ಅಶ್ವಿನ್ ಗೆ ಇಲ್ಲ ಚಾನ್ಸ್: ನಾಯಕ ರೋಹಿತ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಕದಿನ ವಿಶ್ವಕಪ್​ಗೆ (World Cup 2023) ಭಾರತ ತಂಡ ಪ್ರಕಟಗೊಂಡಿದೆ. ಆದರೆ, ನಿರೀಕ್ಷೆ ಮಾಡಲಾಗಿದ್ದ ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ನಿರಾಸೆ ಎದುರಾಗಿದೆ.

ಏತನ್ಮಧ್ಯೆ, ನಾಯಕ ರೋಹಿತ್ ಶರ್ಮಾ (Rohit Sharma) ಈ ಮೂವರನ್ನು ಕೈ ಬಿಟ್ಟಿದ್ದಕ್ಕೆ ಸಮರ್ಥನೆ ನೀಡಿದ್ದಾರೆ. 2023ರ ವಿಶ್ವಕಪ್ ತಂಡದಲ್ಲಿ ಕೇವಲ 15 ಸದಸ್ಯರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯವಾಗುತ್ತಿದೆ. ಹೀಗಾಗಿ ಅವರನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ.

2011ರಲ್ಲಿ ನಾನು ಇದೇ ಸ್ಥಿತಿಯನ್ನು ಅನುಭವಿಸಿದ್ದೇನೆ. ಅವಕಾಶ ತಪ್ಪಿದಾಗ ಅದು ಗೊತ್ತಾಗುತ್ತದೆ. ನೀವು ನಿಮ್ಮ ಗಲ್ಲವನ್ನು ಮೇಲಕ್ಕೆತ್ತಿ ಅವಕಾಶಗಳನ್ನು ಎದುರು ನೋಡಬೇಕು. ನಾವು ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಇದು 2023 ರ ವಿಶ್ವಕಪ್​ಗೆ ಲಭ್ಯವಿರುವ ಅತ್ಯುತ್ತಮ ಆಟಗಾರರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ರೋಹಿತ್ ಶರ್ಮಾ 2011 ರ ವಿಶ್ವಕಪ್ ತಂಡದ ಆಯ್ಕೆಯಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಆಗ ಅವರಿಗೂ ನಿರಾಶೆಯಾಯಿತು. ಆದಾಗ್ಯೂ, ಅವರು ಪುಟಿದೆದ್ದಿದ್ದರು. 12 ವರ್ಷಗಳ ನಂತರ, ಅವರು ತವರಿನಲ್ಲಿ ನಡೆಯಲಿರುವ ವಿಶ್ವಕಪ್​​ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!