ಮೋದಿ ಬ್ರಿಟಿಷರ ವಿರೋಧಿಯಾಗಿದ್ದರೆ ರಾಷ್ಟ್ರಪತಿ ಭವನವನ್ನು ಏನು ಮಾಡುತ್ತಾರೆ?: ಅಧೀರ್‌ ರಂಜನ್‌ ಚೌಧರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

`ರಿಪಬ್ಲಿಕ್‌ ಆಫ್‌ ಭಾರತ್‌’ (Republic Of Bharat) ಎಂದು ಮುನ್ನೆಲೆಗೆ ಬಂದ ಕೂಡಲೇ ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದಿದ್ದು, ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೂ (Hindu) ಹೆಸರನ್ನು ನೀಡಿದವರು ವಿದೇಶಿಯರು ಎಂದು ಕಾಂಗ್ರೆಸ್‌ (Congress) ಸಂಸದ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ಹೇಳಿದ್ದಾರೆ.

ಇಂಡಿಯಾ (INDIA) ಎಂಬ ಮೈತ್ರಿಕೂಟ ರಚನೆಯಾದ ದಿನದಿಂದ ಪ್ರಧಾನಿ ಮೋದಿಯವರಿಗೆ (PM Narendra Modi) ಇಂಡಿಯಾ ಎಂಬ ಹೆಸರಿನ ಮೇಲೆ ದ್ವೇಷ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ.

ರಾಷ್ಟ್ರಪತಿಗಳ ನಿವಾಸವಾಗಿರುವ ರಾಷ್ಟ್ರಪತಿ ಭವನ (Rashtrapati Bhavan) ಈ ಹಿಂದೆ ಬ್ರಿಟಿಷ್‌ ವೈಸ್‌ರಾಯ್‌ ಮನೆಯಾಗಿತ್ತು. ಮೋದಿಯವರು ಬ್ರಿಟಿಷರ ವಿರೋಧಿಯಾಗಿದ್ದರೆ ರಾಷ್ಟ್ರಪತಿ ಭವನವನ್ನು ಏನು ಮಾಡುತ್ತಾರೆ ಎಂದು ಅಧೀರ್‌ ರಂಜನ್‌ ಪ್ರಶ್ನೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!