‘ಬಾನದಾರಿಯಲ್ಲಿ’ ಬಂದ ಗಣೇಶ್: ಗೋಲ್ಡನ್​ ಸ್ಟಾರ್ ಸಿನಿಮಾ ಟ್ರೈಲರ್ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗೋಲ್ಡನ್​ ಸ್ಟಾರ್​ ನಟ ಗಣೇಶ್​ ಅಭಿನಯದ ಬಹುನಿರೀಕ್ಷಿತ ‘ಬಾನದಾರಿಯಲ್ಲಿ’ ಸಿನಿಮಾದ ಟ್ರೇಲರ್​ ಲಾಂಚ್​ ಅದ್ದೂರಿಯಾಗಿ ನಡೆಯಿತು.

‘ಬಾನ ದಾರಿಯಲ್ಲಿ’ ಸಿನಿಮಾದ ಮೂಲಕ ಮತ್ತೊಂದು ರೊಮ್ಯಾಂಟಿಕ್, ಸ್ಯಾಡ್ ಪ್ರೇಮಕತೆಯೊಂದಿಗೆ ಗಣೇಶ್ ಮರಳಿದ್ದಾರೆ.

ಟ್ರೈಲರ್​ನಲ್ಲಿ ಗಣೇಶ್ ಹಾಗೂ ನಟಿ ರೀಮಾ ನಾಣಯ್ಯ, ರುಕ್ಮಿಣಿ ವಸಂತ್ ಅವರುಗಳ ಜೊತೆಗೆ ರಂಗಾಯಣ ರಘು ಸಹ ಕಾಣಿಸಿಕೊಂಡಿದ್ದಾರೆ. ಜಾಲಿ ಹುಡುಗನೊಬ್ಬ ಗಂಭೀರವಾಗಿ ಪ್ರೀತಿಯಲ್ಲಿ ಬಿದ್ದು, ಆ ಪ್ರೀತಿಗೆ ಪ್ರೀತಿಸಿದ ಹುಡುಗಿಯ ಪೋಷಕರು ಅಡ್ಡಾದಾಗ ಶಕ್ತಿ ಬಳಸಿ ಅಲ್ಲದೆ ವ್ಯಕ್ತಿತ್ವ ಬಳಸಿ ಹೇಗೆ ಅಡ್ಡಿಯನ್ನು ತೊಲಗಿಸಿ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೆ, ಅಸಲಿಗೆ ನಿಜಕ್ಕೂ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೋ ಅಥವಾ ಇಲ್ಲವೋ ಎಂಬುದೇ ಕತೆ.

‘ಬಾನ ದಾರಿಯಲ್ಲಿ’ ಸಿನಿಮಾವನ್ನು ಗಣೇಶ್​ರ ಹಳೆಯ ಗೆಳೆಯ ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಸಖತ್ ಕಲರ್​ಫುಲ್ ಆಗಿ ನಿರ್ದೇಶನ ಮಾಡಿದ್ದಾರೆ. ಹಲವು ಹೊಸ ಲೊಕೇಶನ್​ಗಳಲ್ಲಿ ಶೂಟ್ ಮಾಡಲಾಗಿದೆ. ಸಿನಿಮಾಕ್ಕೆ ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಅಭಿಲಾಷ್ ಕಲಾತಿ ಸಿನಿಮಾಟೊಗ್ರಫಿ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಬಾನ ದಾರಿಯಲ್ಲಿ’ ಸಿನಿಮಾವು ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!