ರಾಹುಲ್ ಗಾಂಧಿಗೆ ಸಂಕಷ್ಟ: ಮತ್ತೆ ಸಂಸತ್ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಹುಲ್ ಗಾಂಧಿ (Congress Leader Rahul Gandhi) ಗೆ ಮತ್ತೆ ಸಂಸತ್ ಸದಸ್ಯತ್ವವನ್ನು (Member of Parliament) ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಇದರೊಂದಿಗೆ ಮತ್ತೊಂದು ಸಂಕಟ ರಾಹುಲ್ ಗಾಂಧಿಗೆ ಎದುರಾಗಿದೆ.

ಒಮ್ಮೆ ಜನಪ್ರತಿನಿಧಿಗಳು ಕಾನೂನಿನ ಕಾರ್ಯಾಚರಣೆಯಿಂದ ತಮ್ಮ ಸದಸ್ಯತ್ವವನ್ನು ಕಳೆದುಕೊಂಡರೆ, ಅವರು ಆರೋಪಗಳಿಂದ ಮುಕ್ತರಾಗುವವರೆಗೆ ಅವರನ್ನು ಸಂಸದರಾಗಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. “ಅಷ್ಟೇ ಅಲ್ಲದೇ ಶಿಕ್ಷೆಗೊಳಗಾದ ಶಾಸಕರ ಸದಸ್ಯತ್ವವನ್ನು ಕಳೆದುಕೊಳ್ಳುವ ಕುರಿತು ಅಧಿಸೂಚನೆಯನ್ನು ಸಂಬಂಧಪಟ್ಟ ಸದನದ ಅಧ್ಯಕ್ಷರು/ಸ್ಪೀಕರ್ ಅವರು ಸೂಚಿಸುತ್ತಾರೆಯೇ ಅಥವಾ ಇದು ಭಾರತದ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದಾಗಿಯೇ ಎಂದು ಅರ್ಜಿಯಲ್ಲಿ ಕೇಳಲಾಗಿದೆ.

ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ರಾಹುಲ್ ಗಾಂಧಿಗೆ ಶಿಕ್ಷೆ ನೀಡಿತ್ತು. ಹಾಗಾಗಿ ಅವರು ಸಂಸದ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ, ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಸಂಸದ ಸ್ಥಾನವನ್ನು ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!