CINE| ಟ್ರೆಂಡ್‌ ಸೃಷ್ಟಿಸಿದ್ದ ʻಕಾವಾಲಯ್ಯʼ ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದ ಚಿತ್ರತಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ʻಜೈಲರ್ʼ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಇತ್ತೀಚಿನ ಬ್ಲಾಕ್ ಬಸ್ಟರ್ ಸಿನಿಮಾ. ಹಾಗೂ ಈ ಸಿನಿಮಾದ ‘ಕಾವಾಲಯ್ಯಾ’ ಹಾಡು ಬಿಡುಗಡೆಗೂ ಮುನ್ನವೇ ಸಿನಿಮಾಗೆ ಒಳ್ಳೆ ಕ್ರೇಜ್ ತಂದಿತ್ತು. ಅನಿರುದ್ಧ್ ನೀಡಿದ ಆಕರ್ಷಕ ಟ್ಯೂನ್‌ಗೆ ಡ್ಯಾನ್ಸ್ ಮಾಸ್ಟರ್ ಜಾನಿ ಕೊರಿಯೋಗ್ರಫಿ ಮಾಡಿದ ಗ್ರೇಸ್ ಸ್ಟೆಪ್ಸ್‌ಗೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಅಧಿಕೃತವಾಗಿ ಆ ಹಾಡಿನ ವಿಡಿಯೋವನ್ನು ಚಿತ್ರತಂಡ ರಿಲೀಸ್‌ ಮಾಡಿದೆ.

ತಮನ್ನಾ ನೃತ್ಯಕ್ಕೆ ಬೋಲ್ಡ್‌ ಆಗದವರೇ ಇಲ, ಆಡಿಯೋ ಸಾಂಗ್‌ ರಿಲೀಸ್‌ ಆದಾಗಿನಿಂದ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಸೃಷ್ಟಿ ಮಾಡಿತ್ತು. ಈ ಹಾಡಿನ ಸಂಪೂರ್ಣ ವಿಡಿಯೋಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಚಿತ್ರತಂಡ ಸಂಪೂರ್ಣ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ.

ಈ ಚಿತ್ರವು ಇಂದಿನಿಂದ (ಸೆಪ್ಟೆಂಬರ್ 7) OTT ನಲ್ಲಿ ಪ್ರಸಾರವಾಗಲಿದೆ. ಈ ಚಲನಚಿತ್ರವು Amazon Prime ವೀಡಿಯೊದಲ್ಲಿ ಲಭ್ಯವಿರುತ್ತದೆ. ಮತ್ತು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡಿದ್ದರೆ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!