ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರಿಗರಿಯಾದ ದೋಸೆ ತಿನ್ಬೇಕು ಅನ್ನುಸ್ತಿದ್ಯಾ ಹಾಗಿದ್ರೆ ಟ್ರೈ ಮಾಡಿ ಸವಿದು ನೋಡಿ ಅವಲಕ್ಕಿ ದೋಸೆ.
ಬೇಕಾಗುವ ಸಾಮಾಗ್ರಿಗಳು:
*ಅಕ್ಕಿ
*ಕುಚ್ಚುಲಕ್ಕಿ (ಕೆಂಪು ಅಕ್ಕಿ)
*ಅವಲಕ್ಕಿ
*ಉಪ್ಪು
*ಎಣ್ಣೆ/ತುಪ್ಪ
ಮಾಡುವ ವಿಧಾನ:
* ಮೊದಲು ಅಕ್ಕಿಯನ್ನು 7-8 ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಿ.
* ನಂತರ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಸಾಕಷ್ಟು ನೀರು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಅವಲಕ್ಕಿ, ಮೊಸರು/ಮಜ್ಜಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಹಿಟ್ಟಿಗೆ ಅಗತ್ಯ ಉಪ್ಪು ಸೇರಿಸಿ. ಹಿಟ್ಟು ಮಜ್ಜಿಗೆಯಂತೆ ದಪ್ಪಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
* ಇದೀಗ ಒಲೆ ಮೇಲೆ ತವಾವನ್ನು ಇಟ್ಟು ಬಿಸಿ ಮಾಡಿಕೊಳ್ಳಿ. ನಂತರ ತವಾ ಮೇಲೆ ಹಿಟ್ಟನ್ನು ಸವರಿ.
* ದೋಸೆಯನ್ನು ಚೆನ್ನಾಗಿ ಬೇಯಿಸಿ. ಇದೀಗ ಗರಿಗರಿಯಾದ ಅವಲಕ್ಕಿ ದೋಸೆ ಸವಿಯಲು ಸಿದ್ಧ.