HEALTH | ಹಣ್ಣುಗಳನ್ನು ಯಾವಾಗ ತಿನ್ನಬೇಕು? ರಾತ್ರಿ, ಬೆಳಗ್ಗೆ ಅಥವಾ ಮಧ್ಯಾಹ್ನ?

ಹಣ್ಣುಗಳನ್ನು ತಿನ್ನೋದಕ್ಕೂ ಇಂಥದ್ದೇ ಸಮಯ ಅಂತಿದ್ಯಾ? ನಮಗಿಷ್ಟ ಬಂದಾಗ ಹಣ್ಣು ತಿಂತೀವಿ ಸಮಯ ಎಲ್ಲಾ ನೋಡೋದಿಲ್ಲ ಎನ್ನೋದಾದ್ರೆ ಇಲ್ಲೊಮ್ಮೆ ಕಣ್ಣಾಡಿಸಿ..

ಹಣ್ಣುಗಳನ್ನು ತಿನ್ನೋಕೂ ಬೆಸ್ಟ್ ಟೈಮ್ ಇದೆ, ಈ ರೀತಿ ತಿನ್ನೋದ್ರಿಂದ ನ್ಯೂಟ್ರೀಷನ್ ವ್ಯಾಲ್ಯೂ ಹೆಚ್ಚಾಗುತ್ತದೆ. ಸಿಟ್ರಸ್ ಹಣ್ಣುಗಳು ಅಂದ್ರೆ ಹುಳಿ ಅಂಶ ಇರುವ ಯಾವುದೇ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಹೊಟ್ಟೆ ಹಸಿದುಕೊಂಡಾಗ ತಿನ್ನಬೇಡಿ. ಇದು ಗ್ಯಾಸ್ಟ್ರಿಕ್ ಹಾಗೂ ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು.

ಇನ್ನು ಹುಳಿ ಅಂಶ ಇರುವ ಹಣ್ಣುಗಳು ಹಾಗೂ ಸಿಹಿ ಹಣ್ಣುಗಳನ್ನು ಮಿಕ್ಸ್ ಮಾಡಬಾರದು. ಊಟಕ್ಕಿಂತ ಅರ್ಧ ಗಂಟೆ ಮುಂಚೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಊಟದ ನಂತರ ಹಣ್ಣು ತಿನ್ನುವ ಅಭ್ಯಾಸ ಇದ್ದರೆ ಊಟ ಹಾಗೂ ಹಣ್ಣು ತಿನ್ನುವ ಸಮಯದ ಮಧ್ಯೆ ಗ್ಯಾಪ್ ಇರುವಂತೆ ನೋಡಿಕೊಳ್ಳಿ.

ಊಟ ಆದ ನಂತರ ಹಣ್ಣು ತಿನ್ನಬಾರದು ಎಂದೇನಿಲ್ಲ ಆದರೆ ಊಟ ಮಾಡದೇ ಖಾಲಿ ಹೊಟ್ಟೆ ಇದ್ದರೆ ಹಣ್ಣು ಬೇಗ ಜೀರ್ಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!