ಸ್ಪೇನ್ ಅಧ್ಯಕ್ಷ ಪೆಡ್ರೋಗೆ ಕೊರೋನಾ, ಜಿ20 ಶೃಂಗಸಭೆಗೆ ಗೈರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಪೇನ್ ಅಧ್ಯಕ್ಷ ಪೆಡ್ರೋ ಸ್ಯಾಂಚೆಝ್‌ಗೆ ಕೊರೋನಾ ಸೋಂಕು ತಗುಲಿದ್ದು, ಜಿ20 ಶೃಂಗಸಭೆಗೆ ಗೈರಾಗಲಿದ್ದಾರೆ.

ದೆಹಲಿಯಲ್ಲಿ ಸೆ.9,10 ಐತಿಹಾಸಿಕ ಜಿ೨೦ ಶೃಂಗಸಭೆ ನಡೆಯಲಿದ್ದು, ವಿಶ್ವದ ನಾಯಕರು ಆಗಮಿಸಲಿದ್ದಾರೆ. ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಆಗುತ್ತಿಲ್ಲ ಎಂದು ಸ್ಪೇನ್ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

ವೈಸ್ ಪ್ರೆಸಿಡೆಂಟ್ ನಾಡಿಯಾ ಹಾಗೂ ವಿದೇಶಾಂಗ ಸಚಿವ ಜೋಸ್ ಮ್ಯಾನುಯಲ್ ಆಲ್ಬರಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪೆಡ್ರೋ ಅವರ ಆರೋಗ್ಯ ಉತ್ತಮವಾಗಿದೆ. ಶೃಂಗಸಭೆಯಿಂದ ದೂರ ಉಳಿದಿರುವ ಮೂರನೇ ವಿಶ್ವ ನಾಯಕ ಪೆಡ್ರೋ ಆಗಿರಲಿದ್ದಾರೆ. ಚೀನಾ, ರಷ್ಯಾ ಅಧ್ಯಕ್ಷರು ದೆಹಲಿಗೆ ಭೇಟಿ ನೀಡುತ್ತಿಲ್ಲ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!