ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಕ್ಷಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು (International Literacy Day 2023) ಆಚರಿಸಲಾಗುತ್ತಿದೆ. ಈ ದಿನದ ಇತಿಹಾಸ, ಪ್ರಾಮುಖ್ಯತೆ ಮತ್ತು ವಿಷಯದ ಬಗ್ಗೆ ಇಲ್ಲಿ ತಿಳಿಯಿರಿ.
ಇತಿಹಾಸ ಮತ್ತು ಮಹತ್ವ:
1966ರಲ್ಲಿ ಸೆಪ್ಟೆಂಬರ್ 8 ಅನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲು ಯುನೆಸ್ಕೋ ನಿರ್ಧರಿಸಿತು. ಅಂದಿನಿಂದ ಇಂದಿನವರೆಗೂ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
1965 ರಲ್ಲಿ ಶಿಕ್ಷಣ ಮಂತ್ರಿಗಳು ಇರಾನ್‌ನ ಟೆಹ್ರಾನ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಈ ದಿನದ ಆಚರಣೆ ಬಗ್ಗೆ ಚರ್ಚಿಸಿದರು, ನಂತರ 26 ಅಕ್ಟೋಬರ್ 1966ರಂದು ಯುನೆಸ್ಕೋ ತನ್ನ 14ನೇ ಸಾಮಾನ್ಯ ಸಮ್ಮೇಳನದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಸಾಕ್ಷರತಾ ದಿನ ಎಂದು ಘೋಷಿಸಿತು.
ವಿಶ್ವ ಸಾಕ್ಷರತಾ ದಿನದ ಥೀಮ್ 2023 ಏನು?
ಪ್ರತಿ ವರ್ಷ ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿವಿಧ ವಿಷಯಗಳೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ ‘ಪರಿವರ್ತನೆಯಾಗುತ್ತಿರುವ ಜಗತ್ತಿನಲ್ಲಿ ಸಾಕ್ಷರತೆಯ ಪ್ರಾಮುಖ್ಯತೆ: ಸುಸ್ಥಿರ ಮತ್ತು ಶಾಂತಿಯುತ ಸಮಾಜಗಳಿಗೆ ಅಡಿಪಾಯವನ್ನು ನಿರ್ಮಿಸುವುದು.’
ಈ ಥೀಮ್ ನಮ್ಮ ಜಗತ್ತನ್ನು ಹೆಚ್ಚು ಶಾಂತಿಯುತ, ನ್ಯಾಯೋಚಿತ ಮತ್ತು ಸಮರ್ಥನೀಯವಾಗಿಸುವಲ್ಲಿ ಸಾಕ್ಷರತೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.