ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಚು ವಿಷ್ಣು ಕೃಷ್ಣಂ ರಾಜು ಅಭಿನಯದ ಕ್ಲಾಸಿಕ್ ಸಿನಿಮಾ ‘ಭಕ್ತ ಕಣ್ಣಪ್ಪ’ ಸಿನಿಮಾವನ್ನು ಆದರ್ಶವಾಗಿಟ್ಟುಕೊಂಡು ‘ಕಣ್ಣಪ್ಪ’ ಎಂಬ ಶೀರ್ಷಿಕೆಯೊಂದಿಗೆ ಮಂಚು ಹೊಸ ಚಿತ್ರ ಘೋಷಿಸಿದ್ದು, ಇದರಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನನ್ನ ಕನಸಿನ ಯೋಜನೆ ಎಂದು ಹೇಳಿರುವ ವಿಷ್ಣು, ಇತ್ತೀಚೆಗಷ್ಟೇ ಈ ಚಿತ್ರ ಪೂಜಾ ಕಾರ್ಯಕ್ರಮವೂ ಆಗಿದೆ. ಸುಮಾರು 150 ಕೋಟಿ ಬಜೆಟ್ನಲ್ಲಿ ಮೋಹನ್ ಬಾಬು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಬಾಲಿವುಡ್ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಷ್ಣುಗೆ ಜೋಡಿಯಾಗಿ ಬಾಲಿವುಡ್ ನಟಿ ನೂಪುರ್ ಸನೋನ್ ನಟಿಸಲಿದ್ದಾರೆ.
ಸದ್ಯ ವಿದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡದಿದಂದ ಒಂದು ರೋಚಕ ಅಪ್ಡೇಟ್ ಬಂದಿದೆ. ಮಂಚು ವಿಷ್ಣು ಭಕ್ತ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಫುಲ್ ಲೆಂಗ್ತ್ ಪಾತ್ರ ಇರಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಚಿತ್ರದಲ್ಲಿ ಮಂಚು ವಿಷ್ಣು ಭಕ್ತ ಕಣ್ಣಪ್ಪನಾಗಿ ನಟಿಸುತ್ತಿದ್ದರೆ, ಪ್ರಭಾಸ್ ಶಿವನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇಂತಹ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಮಂಚು ವಿಷ್ಣು ಟ್ವೀಟ್ ಅನ್ನು ಶೇರ್ ಮಾಡಿ ಹರಹರ ಮಹಾದೇವ ಎಂದು ಮರು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಶಿವನ ಪಾತ್ರ ಮಾಡಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದರಿಂದ ಅಭಿಮಾನಿಗಳು ಸಂತಸಗೊಂಡಿದ್ದರೆ, ಕೆಲವರು ಮಂಚು ವಿಷ್ಣು ಚಿತ್ರದಲ್ಲಿ ಪ್ರಭಾಸ್ ನಟಿಸಬೇಕಾ? ಎಂಬ ಕಾಮೆಂಟ್ ಗಳು ಬರುತ್ತಿವೆ. ಆದಿಪುರುಷದಲ್ಲಿ ರಾಮನಾಗಿ ಮಿಂಚಿದ್ದ ಪ್ರಭಾಸ್ ಈಗ ಕಣ್ಣಪ್ಪನಲ್ಲಿ ಶಿವನಾಗಿ ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.
❤️ Har Har Mahadev ❤️ #Kannappa 🔥 https://t.co/GXbSbayFrX
— Vishnu Manchu (@iVishnuManchu) September 10, 2023