ರಾಜ್ಯಾದ್ಯಂತ ಡೆಂಗ್ಯೂ ಉಲ್ಬಣಗೊಂಡಿದ್ದು, ಸ್ವಚ್ಛತೆ ಬಗ್ಗೆ ಗಮನಹರಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ಡೆಂಗ್ಯೂ ಲಕ್ಷಣಗಳೇನು? ಡೆಂಗ್ಯೂ ಯಾಕೆ ಬರುತ್ತದೆ?
ಸೊಳ್ಳೆಗಳ ಕಡಿತದಿಂದಾಗಿ ಡೆಂಗ್ಯೂ ಫೀವರ್ ಬಾಧಿಸುತ್ತದೆ. ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಡೆಂಗ್ಯೂ ಮೊದಲ ಲಕ್ಷಣಗಳೇನು?
ಹೊಟ್ಟೆನೋವು, ಅತಿಯಾದ ಅಥವಾ ಮೈಲ್ಡ್
ವಾಂತಿಯಾಗುವುದು
ಮೂಗು ಅಥವಾ ಒಸಡಿನಿಂದ ರಕ್ತ ಸುರಿಯುವುದು
ಯುರಿನ್ ಅಥವಾ ಮಲದಲ್ಲಿ ರಕ್ತ ಕಾಣುವುದು
ಚರ್ಮದಲ್ಲಿ ಗಾಯ, ಹೊಡೆತ ಬಿದ್ದಂತೆ ಕಾಣಿಸುವುದು
ಮಾಮೂಲಾಗಿ ಉಸಿರಾಡಲು ಆಗದೇ ಇರುವುದು
ಸುಸ್ತು, ಬೇಧಿ
ಇರಿಟೇಟ್ ಆಗುವುದು, ರೆಸ್ಟ್‌ಲೆಸ್‌ನೆಸ್
ಗಂಭೀರ ಲಕ್ಷಣಗಳು
ಅತಿಯಾದ ಹೊಟ್ಟೆ ನೋವು
ಉಸಿರಾಟಕ್ಕೆ ತುಂಬಾ ಕಷ್ಟ ಎನಿಸುವುದು
ಅತಿಸಾರ ವಾಂತಿ ನಿಲ್ಲದೇ ಇರುವುದು
ಮೂಗಿನಿಂದ ರಕ್ತ ಸುರಿಯುವುದು
ಯಾವುದೇ ಲಕ್ಷಣಗಳು ಕಾಣಿಸಿದರೂ ಕೂಡಲೇ ವೈದ್ಯರನ್ನು ಸಂಪರ್ಕಿಸಿ