ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಗಲು ಹೊತ್ತು ಏನಾದರು ಕೆಲಸದಲ್ಲಿ ತೊಡಗಿರುವಾಗ ಪದೇ ಪದೇ ಆಕಳಿಕೆ ಬರುತ್ತಾ ? ಹಾಗಾದ್ರೆ ಕೂಡಲೇ ಈ ಸಲಹೆಗಳನ್ನು ಅನುಸರಿಸಿ.
ತಂಪು ಪಾನೀಯ ಸೇವಿಸಿ
ನಿರಂತರವಾಗಿ ಆಕಳಿಕೆ ಬರುತ್ತಿದ್ದರೆ ತಂಪಾದ ಪಾನೀಯ ಸೇವಿಸುವುದು ಒಳ್ಳೆಯದು. ಒಂದು ವೇಳೆ ನಿಮಗೆ ತಂಪು ಪಾನೀಯ ಕುಡಿದರೆ ಶೀತ ಸಂಭವಿಸುತ್ತದೆ ಎಂದಾದರೆ ತಾಜಾ ಹಣ್ಣಿನ ರಸವನ್ನು ಕುಡಿಯಿರಿ. ಇದರಿಂದ ತಕ್ಷಣ ಆಕಳಿಕೆ ನಿಲ್ಲುವುದಲ್ಲದೆ, ದೇಹದಲ್ಲಿ ಆಗಿರುವ ಸುಸ್ತು ಕೂಡ ಕಡಿಮೆಯಾಗುತ್ತದೆ
ಧೀರ್ಘವಾಗಿ ಉಸಿರಾಡಿ
ಉಸಿರಾಟದ ಸಮಸ್ಯೆಯಿಂದ ಬಳಲುವವರಿಗೆ ಆಗಾಗ್ಗೆ ಆಕಳಿಕೆ ಬರುತ್ತದೆ. ಇಂತಹ ಸಂದರ್ಭದಲ್ಲಿ ದೀರ್ಘವಾಗಿ ಉಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಡಬೇಕು. ಈ ರೀತಿ ಮಾಡಿದಾಗ ರಕ್ತ ಪರಿಚಲನೆ ಕೂಡ ಸರಿಯಾಗಿ ಆಗುತ್ತದೆ. ಉಸಿರಾಟವು ಕೂಡ ಸರಾಗವಾಗಿ ಆಗುವುದರಿಂದ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇದರಿಂದ ದೇಹದಲ್ಲಿರುವ ಆಯಾಸವು ಕಡಿಮೆಯಾಗಿ ಉಸಿರಾಟ ಸರಿಯಾಗಿ ಆಗುತ್ತದೆ. ಜೊತೆಗೆ ಆಕಳಿಕೆ ಕೂಡ ನಿಲ್ಲುತ್ತದೆ.
ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ಪದೇ ಪದೇ ಆಕಳಿಕೆ ಬರ್ತಿದ್ರೆ ನಿಮ್ಮನ್ನು ಕ್ರೀಯಾಶೀಲತೆಯಿಂದಿಡುವ ಚಟುವಟಿಕೆಗಳತ್ತ ಗಮನ ಕೊಡಿ. ಆಗ ಆಕಳಿಕೆಯೂ ನಿಲ್ಲುತ್ತದೆ ಅಲ್ಲದೆ ನಿಮ್ಮ ಮನಸ್ಸಿಗೂ ಕೂಡ ರಿಲ್ಯಾಕ್ಸ್ ಸಿಗುತ್ತದೆ.
ವಾಕ್ ಮಾಡಿ
ತುಂಬಾನೆ ಆಕಳಿಕೆ ಬರ್ತಾ ಇದ್ರೆ ಕೂಡಲೇ ಚೆಂದವಾದ ಒಂದು ವಾಕ್ ಮಾಡಿ. ಆಗ ದೇಹದಲ್ಲಿರುವ ಸುಸ್ತು ಅಥವಾ ದಣಿವು ಇನ್ನಷ್ಟು ದೂರವಾಗುತ್ತದೆ. ಇದರಿಂದ ಹೊರಗಿನ ವಾತಾವರಣಕ್ಕೆ ಮನಸ್ಸು ತೆರೆದುಕೊಳ್ಳುವುದರ ಜೊತೆಗೆ ಆಹ್ಲಾದಗೊಳ್ಳುತ್ತದೆ.
ನೇರವಾಗಿ ಕುಳಿತುಕೊಳ್ಳಿ
ನಾವು ಕುಳಿತುಕೊಳ್ಳುವ ಬಂಗಿಯಿಂದಲೂ ಆಯಾಸ ಎನಿಸಬಹುದು. ಹಾಗಾಗಿ ನೀವು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದಾದರೆ ಆಗಾಗ ನಿಮ್ಮ ಭಂಗಿಯನ್ನು ಬದಲಾಯಿಸಬೇಕು. ನೇರವಾದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಹೀಗೆ ಮಾಡಿದರೆ ಮನಸ್ಸು ಹಾಗೂ ದೇಹ ಎರಡು ಚೈತನ್ಯಗೊಳ್ಳುತ್ತದೆ ಜೊತೆಗೆ ಆಕಳಿಕೆ ಕೂಡ ಬರುವುದಿಲ್ಲ.
ಇದನ್ನು ಹೊರತುಪಡಿಸಿ ನೀರನ್ನು ಕುಡಿಯಿರಿ. ಮುಖಕ್ಕೆ ನೀರನ್ನು ಹಾಕಿ ತೊಳೆದುಕೊಂಡು ಬನ್ನಿ. ಈ ರೀತಿ ಮಾಡುವುದರಿಂದ ಮೂಡ್ ಫ್ರೆಶ್ ಆಗುತ್ತದೆ. ಒಂದು ವೇಳೆ ಕುಳಿತಲ್ಲೇ ಕೆಲಸ ಮಾಡಿ ನಿದ್ದೆ ಬರುತ್ತಿದ್ದರೆ ಆ ನಿದ್ದೆ ಕೂಡ ಓಡಿ ಹೋಗುತ್ತದೆ.