ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ಅಭಿನಯದ ಜವಾನ್ ರಿಲೀಸ್ ಆಗಿ ದಿನಗಳೇ ಜಳೆದರೂ ಕಲೆಕ್ಷನ್ ಮಾತ್ರ ಕಡಿಮೆಯಾಗಿಲ್ಲ. ನಾಲ್ಕನೇ ದಿನಕ್ಕೆ ಸಿನಿಮಾ 300 ಕೋಟಿ ಕ್ಲಬ್ ಸೇರಿದೆ.
ವೀಕ್ ಡೇಗಳಲ್ಲಿ ಸಿನಿಮಾ ಕಲೆಕ್ಷನ್ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಜವಾನ್ ಸಿನಿಮಾ ಎಗ್ಗಿಲ್ಲದೇ ಸಾಗುತ್ತಿದೆ.
ಅತಿ ವೇಗವಾಗಿ 250 ಕೋಟಿ ರೂಪಾಯಿ ಗಳಿಕೆ ಮಾಡಿದ ಹಿಂದಿ ಸಿನಿಮಾ ಎನ್ನುವ ಹೆಗ್ಗಳಿಕೆ ಜವಾನ್ ಸಿನಿಮಾದ್ದು. ಕೆಜಿಎಫ್ 2 ಹಾಗೂ ಬಾಹುಬಲಿ 2 ಹಿಂದಿ ವರ್ಷನ್‌ನ್ನು ಜವಾನ್ ದಾಖಲೆ ಮೀರಿಸಿದೆ.
ಹಿಂದಿ ವರ್ಷನ್ ಕೆಜಿಎಫ್ 2 250 ಕೋಟಿ ಸಂಪಾದಿಸಲು ಏಳು ದಿನಗಳು ಬೇಕಾಗಿತ್ತು, ಬಾಹುಬಲಿ2 ಗೆ ಎಂಟು ದಿನ ಆದರೆ ಜವಾನ್ 4 ದಿನದಲ್ಲಿ ಕಲೆಕ್ಷನ್ ಮಾಡಿದೆ.