ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ನೀಡಿದ ಹೇಳಿಕೆ ದೇಶವ್ಯಾಪ್ತಿ ಭಾರೀ ಚರ್ಚೆ ಯಾಗುತ್ತಿದ್ದು,ಇದರ ನಡುವೆ ಡಿಎಂಕೆ ಸರ್ಕಾರದ ಮತ್ತೊಬ್ಬ ಸಚಿವರು ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ತಮಿಳುನಾಡು ಉನ್ನತ ಸಚಿವ ಕೆ ಪೊನ್ಮುಡಿ (Tamil Nadu Minister K Ponmudy) ಅವರು, ಇಂಡಿಯಾ ಮೈತ್ರಿ ಕೂಟವನ್ನು ಸನಾತನ ಧರ್ಮದ ವಿರುದ್ಧ ಹೋರಾಡಲು ರಚಿಸಲಾಗಿದೆ ಎಂದು ಹೇಲಿದ್ದು, ಈ ಮೂಲಕ ವಿವಾದಕ್ಕೆ ಹೊಸ ಆಯಾಮ ನೀಡಿದ್ದಾರೆ.
ಈ ಕುರಿತ ವಿಡಿಯೋ ವೈರಲ್ ಆಗಿದ್ದು,ಇಂಡಿಯಾ ಮೈತ್ರಿ ಕೂಟವು ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು ರಚನೆಯಾಗಿದೆ, ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸಂತಾನ ಧರ್ಮದ ವಿರುದ್ಧದ ಹೋರಾಟದಲ್ಲಿ ಮೈತ್ರಿಯಲ್ಲಿರುವ 26 ಪಕ್ಷಗಳು ಒಗ್ಗೂಡಿವೆ. ಅದಕ್ಕಾಗಿ ರಾಜಕೀಯ ಶಕ್ತಿ ಬೇಕು ಎಂದು ಸಚಿವ ಕೆ ಪೊನ್ಮುಡಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳುತ್ತಿರುವ ವಿಡಿಯೋ ಕ್ಲಿಪ್ ವೈರಲ್ ಆಗಿದೆ.
ಇದಕ್ಕೂ ಮೊದಲು ಕೇಂದ್ರ ಮಾಜಿ ಸಚಿವರೂ ಆಗಿರು ಡಿಎಂಕೆ ಪ್ರಮುಖ ಎ ರಾಜಾ ಅವರು, ಸನಾತನ ಧರ್ಮವನ್ನು ಏಡ್ಸ್ ಹಾಗೂ ಕುಷ್ಠ ರೋಗಕ್ಕೆ ಹೋಲಿಸಿದ್ದರು. ಅಲ್ಲದೇ, ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಆಡಿರುವ ಮಾತುಗಳಿಗೆ ತಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದರು.