ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ (Sandalwood)ನಲ್ಲಿ ಗೆದ್ದು ಬೀಗಿದ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾ ಇದೀಗ ಮಾಲಿವುಡ್‌ನಲ್ಲಿ ಅಬ್ಬರಿಸಲು ಸಿದ್ಧವಾಗಿದೆ.
ಮಲಯಾಳಂನಲ್ಲೂ ‘ಟೋಬಿ’ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ.
ಆಗಸ್ಟ್ 25ರಂದು ನೈಜ ಕಥೆಯನ್ನ ಆಧರಿಸಿದ ‘ಟೋಬಿ’ ಸಿನಿಮಾ ತೆರೆ ಕಂಡಿತ್ತು. ರಾಜ್- ಚೈತ್ರಾ ಆಚಾರ್ ಕಾಂಬೋ ಮೋಡಿ ಮಾಡಿತ್ತು. ಈಗ ಮಲಯಾಳಂ ಭಾಷೆಯಲ್ಲೂ ಕೂಡ ಟೋಬಿ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಸೆ.22ಕ್ಕೆ ಟೋಬಿ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ.
ರಾಜ್ ಬಿ ಶೆಟ್ಟಿ ಮಾತು ಬರ ವ್ಯಕ್ತಿಯಾಗಿ ಸಿನಿಮಾದಲ್ಲಿ ಜೀವತುಂಬಿದ್ದಾರೆ. ಸಿನಿಮಾದಲ್ಲಿ ಅವರಿಗೆ ಡೈಲಾಗ್ ಇಲ್ಲ, ಆದರೆ ಅವರ ನಟನೆಯೇ ಮಾತನಾಡುವಂತೆ ಮಾಡಿದೆ.