ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ದೀಪಿಕಾ ಪಡುಕೋಣ್ ಜವಾನ್ ಸಿನಿಮಾಕ್ಕಾಗಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಸುದ್ದಿಯಾಗಿದ್ದು, ಇದೀಗ ದೀಪಿಕಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
15 ಕೋಟಿ ರೂಪಾಯಿ ಅಲ್ಲ, ಒಂದು ರೂಪಾಯಿ ಸಂಭಾವನೆಯನ್ನೂ ನಾನು ಪಡೆದಿಲ್ಲ. 83 ಸಿನಿಮಾದಲ್ಲಿಯೂ ಸಂಭಾವನೆ ಇಲ್ಲದೆ ಕೆಲಸ ಮಾಡಿದ್ದೇನೆ ಯಾಕಂದ್ರೆ ಟೀಂ ಮುಖ್ಯ, ನನ್ನ ಪತಿಯ ಯಶಸ್ಸನ್ನು ನೋಡಲು ಇಷ್ಟಪಟ್ಟಿದ್ದೆ.
ಹಾಗೆ ರೋಹಿತ್ ಶೆಟ್ಟಿ ಹಾಗೂ ಶಾರುಖ್ ನನಗೆ ಆಪ್ತರು. ಇವರ ಸಿನಿಮಾಗಳಲ್ಲಿ ಸಂಭಾವನೆ ಪಡೆಯದೇ ಅತಿಥಿ ಪಾತ್ರ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.