ದಿಗಂತ ವರದಿ ವಿಜಯಪುರ:
ಜಮೀನಿನಲ್ಲಿ ಮಲಗಿದ್ದ ವೃದ್ಧನ ಬರ್ಬರ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಶಿವಯೋಗಪ್ಪ ಬಡಿಗೇರ (55) ಹತ್ಯೆಯಾಗಿರುವ ವೃದ್ಧ. ಜಮೀನಿನಲ್ಲಿ ಮಲಗಿದ್ದ ವೇಳೆ ಶಿವಯೋಗಪ್ಪನ ಕುತ್ತಿಗೆ ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿದ್ದು, ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.