ಜನವರಿ ಬಳಿಕ ರಾಜ್ಯ ಸರ್ಕಾರ ಪತನ: ಯತ್ನಾಳ್

ಹೊಸದಿಗಂತ ವರದಿ, ಹುಬ್ಬಳ್ಳಿ:

ಕಾಂಗ್ರೆಸ್ ೪೫ ಶಾಸಕರು ನಮ್ಮ ಸಂರ್ಪಕದಲ್ಲಿದ್ದು, ಜನವರಿ ಬಳಿಕ ರಾಜ್ಯ ಸರ್ಕಾರ ಪತನವಾಗಿಲಿದೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.

ಭಾನುವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಅವರ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಜನವರಿ ಬಳಿಕ ಏನಾಗಲಿದೆ ಕಾದು ನೋಡಿ ಎಂದರು.

ಕಾಂಗ್ರೆಸ್ ಸರ್ಕಾರ ತಾನಾಗಲೇ ಅಧಿಕಾರ ಕಳೆದುಕೊಳ್ಳಲಿದೆ. ಬಿಜೆಪಿ ಸರ್ಕಾರ ಒಡೆಯುವ ಕೆಲಸ ಮಾಡುವುದಿಲ್ಲ. ನನಗೆ ಗ್ಯಾರಂಟಿ ಇದೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಐದು ವರ್ಷ ಅಧಿಕಾರದಲ್ಲಿ ಇರುವುದಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಲು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರನ್ನು ವೇಟಿಂಗ್ ಸಿಎಂ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಬರುವ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಏಕೈಕ ಗುರಿಯಾಗಿದೆ. ಕಳೆದ ಕೋರ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಈ ಚುನಾವಣೆ ಬಿಜೆಪಿ ಸಾಮಾನ್ಯ ಪರಿಗಣಿಸಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಗೆಲ್ಲುವ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಜೀವನದಲ್ಲಿ ಏನಾದರೂ ಆಗಿದ್ದರೆ ಅದು ಬಿಜೆಪಿಯಿಂದ ಮಾತ್ರ. ಆದರೆ ಬಿಜೆಪಿಗೆ ಅವರಿಂದ ಏನು ಆಗಿಲ್ಲ. ಹಲವಾರು ಸ್ಥಾನಗಳ ಅನುಭವಿಸಿದ ಅವರು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಜಗದೀಶ ಶೆಟ್ಟರ ಹಿಂದೆ ಯಾವುದೇ ಲಿಂಗಾಯತರು ಇಲ್ಲ. ಅಪರೇಷನ್ ಮಾಡುವುದ ಅವರಿಗೆ ಆಗಲ್ಲ. ಶೆಟ್ಟರ ನೋಡಿ ಯಾವ ಲಿಂಗಾಯತ ನಾಕರು ಹೋಗಲ್ಲ. ಲಿಂಗಾಯತರಿಗೆ ಅವರು ಏನು ಉಪಕಾರ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಲಿಂಗಾಯರ ನಾಯಕ ಬೆಂಬಲ ಅವರಿಗಿದ್ದರೆ ಮಹೇಶ ಟೆಂಗಿನಕಾಯಿ ವಿರುದ್ಧ ಯಾಕೇ ಸೋಲುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಚೈತ್ರ ಕುಂದಾಪುರ ಅವರ ವಿರುದ್ಧ ಸಂಪೂರ್ಣ ತನಿಖೆಯಾಗಬೇಕು. ಎಲ್ಲ ಪಕ್ಷದಲ್ಲಿ ಇಂತಹ ದಳ್ಳಾಳಿಗಳಿದ್ದಾರೆ. ಸೂಕ್ತ ತನಿಖೆ ನಡೆದರೆ ಎಲ್ಲ ಸತ್ಯಾಂಶ ಹೊರಬರಲಿದೆ. ನಾನು ಹಿಂದೂ ಕಾರ್ಯಕರ್ತ. ತಾಲಿಬಾನ್ ಮೂಲ ಪುರುಷ ಸಿದ್ದರಾಮಯ್ಯರಾಗಿದ್ದು, ಅವರ ಶಿಷ್ಯ ರಾಮಲಿಂಗರೆಡ್ಡಿಯಾಗಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!