ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪವಾಸ..ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ವಾರ ಪೂರ್ತಿ ಕೆಲಸ ಮಾಡಿ, ಒಂದು ದಿನ ರೆಸ್ಟ್ ಬೇಕು ಎಂದು ಹೇಗೆ ಬಯಸುತ್ತೇವೂ ನಮ್ಮ ಜೀರ್ಣಾಂಗ ವ್ಯವಸ್ಥೆಗೂ ವಿಶ್ರಾಂತಿ ಎಂಬುದು ಬೇಕು. ಉಪವಾಸ ಮಾಡಲು ಹಬ್ಬಗಳು ಮತ್ತು ವಿಶೇಷ ದಿನಗಳೇ ಬೇಕೆಂದೇನಿಲ್ಲ. ಉಪವಾಸ ಮಾಡುವುದರಿಂದ ದೇವರು ಪ್ರಸನ್ನನಾಗುತ್ತಾನೋ ಇಲ್ಲವೋ ಗೊತ್ತಿಲ್ಲ ಆದರೆ ಇದು ನಮ್ಮ ಆರೋಗ್ಯಕ್ಕೆ ಖಂಡಿತಾ ಉಪಯೋಗವಾಗುತ್ತದೆ.
ಬೊಜ್ಜು, ಮಧುಮೇಹದಂತಹ ಕಾಯಿಲೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಉಪವಾಸವೇ ಅತ್ಯುತ್ತಮ ಔಷಧ. ಕೆಲವು ರೀತಿಯ ಆಹಾರ ಪದ್ಧತಿಗಳು ದೇಹವು ಸರಿಯಾಗಿ ಜೀರ್ಣವಾಗದ ಹಾನಿಕಾರಕ ವಸ್ತುಗಳನ್ನು ಉತ್ಪಾದಿಸಲು ಕಾರಣವಾಗುತ್ತದೆ. ಇವು ಸ್ವತಂತ್ರ ರಾಡಿಕಲ್ಗಳನ್ನು ಸೃಷ್ಟಿಸುತ್ತವೆ. ಆಯುರ್ವೇದದ ಪ್ರಕಾರ ಉಪವಾಸವು ಈ ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ಸ್ವತಂತ್ರ ರಾಡಿಕಲ್ಗಳನ್ನು ಕಡಿಮೆ ಮಾಡುತ್ತದೆ.
ಉಪವಾಸವು ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿರುವ ಖನಿಜಾಂಶಗಳು ಸರಿಯಾಗಿ ಜೀರ್ಣಿಸಿಕೊಳ್ಳಲು ಶಕ್ತಿ ನೀಡುತ್ತದೆ. ಸರಿಯಾಗಿ ಜೀರ್ಣವಾಗದ ವಸ್ತುಗಳು ಸಹ ಚೆನ್ನಾಗಿ ಜೀರ್ಣವಾಗುತ್ತವೆ ಮತ್ತು ಕಲ್ಮಶಗಳನ್ನು ತೆಗೆದುಹಾಕಲಾಗುತ್ತದೆ.
ಆಧುನಿಕ ವೈಜ್ಞಾನಿಕ ಸಂಶೋಧನೆಯು ಉಪವಾಸದಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ. ಹಾನಿಕಾರಕ ವಿಷಕಾರಿ ವಸ್ತುಗಳನ್ನು ಸಹ ಜೀರ್ಣಿಸಿಕೊಳ್ಳಬಹುದು ಎಂದು ತಿಳಿಸಿದೆ. ಆಟೊಫೇಜಿ ಪ್ರಕ್ರಿಯೆಯ ಮೂಲಕ ದೇಹವು ಹಾನಿಕಾರಕ ವಸ್ತುಗಳನ್ನು ಕೊಲ್ಲಲು ಉಪವಾಸವು ಸಹಾಯ ಮಾಡುತ್ತದೆ ಎಂದು ಈ ಸಂಶೋಧನೆಯು ತೋರಿಸಿದೆ.