ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ಸ್ಟೈಲ್‌ಗೆ ಫಿದಾ ಆಗದ ಹೆಂಗಳೆಯರಿಲ್ಲ. ಕಿಂಗ್ ಖಾನ್‌ಗೆ ಸದಾ ಮಹಿಳಾ ಫ್ಯಾನ್ಸ್ ಹೆಚ್ಚು. ಇದೀಗ ಈ ವಿಷಯ ಮತ್ತೆ ಮತ್ತೆ ಪ್ರೂವ್ ಆಗಿದೆ. ಪಠಾಣ್ ಗೆಲುವಿನ ನಂತರ ಶಾರುಖ್‌ರನ್ನು ಹಿಡಿಯೋರು ಯಾರೂ ಇಲ್ಲದಂತಾಗಿದೆ, ಇನ್ನು ಜವಾನ್ ಕೂಡ ಸೂಪರ್ ಹಿಟ್ ಆಗಿದ್ದು, ಮಹಿಳೆಯರು ಶಾರುಖ್ ನೋಡಲು ಕಾತರರಾಗಿದ್ದಾರೆ.
ಈ ಬೆನ್ನಲ್ಲೇ ಹಳೆ ವಿಡಿಯೋವೊಂದು ವೈರಲ್ ಆಗಿದ್ದು, ಶಾರುಖ್‌ಗೆ ಮಹಿಳಾ ಅಭಿಮಾನಿಗಳು ಮುತ್ತಿಗೆ ಹಾಕಿ ಮುತ್ತು ನೀಡ್ತಿದ್ದಾರೆ. ಶಾರುಖ್‌ಗೆ ಮುಜುಗರ ಆದರೂ ಏನೂ ಆಗದವರಂತೆ ನಗುತ್ತಾ ಮುನ್ನಡೆಯುತ್ತಿದ್ದಾರೆ.
ಇದೇ ಜಾಗದಲ್ಲಿ ಬೇರೆ ಯಾವುದೇ ಹೀರೋ ಇದ್ದಿದ್ದರೂ ಅವರ ಬಾಡಿಗಾರ್ಡ್ಸ್ ಫ್ಯಾನ್ಸ್‌ನ್ನು ಅಷ್ಟು ಹತ್ತಿರಕ್ಕೆ ಬಿಡುತ್ತಲೇ ಇರಲಿಲ್ಲ. ಆದರೆ ಶಾರುಖ್ ನಗುಮುಖದಿಂದ ಅಭಿಮಾನಿಗಳ ಪ್ರೀತಿಯನ್ನು ಸ್ವಾಗತಿಸಿದ್ದಾರೆ. ನೆಟ್ಟಿಗರು ಮಾತ್ರ ಫ್ರೀ ಬಿಟ್ರೆ ಜನ ಈ ರೀತಿ ಎಲ್ಲಾ ಮಾಡ್ಬೋದಾ? ಇದ್ಯಾವ್ ಥರ ಪ್ರೀತಿ ಅಂತ ಹೇಳ್ತಿದ್ದಾರೆ!