ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶದ ವಿರುದ್ಧ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿವೆ. ಮಳೆ ಬಾರದೆ ಕುಡಿಯಲು ನೀರಲ್ಲದೆ ಪರದಾಡುವ ಸ್ಥಿತಿ ಬಂದರೂ ತಮಿಳುನಾಡಿಗೆ ನೀರು ಬಿಡುತ್ತಿರುವುದರ ವಿರುದ್ಧ ಯಾವೊಬ್ಬ ನಟನೂ ಧ್ವನಿಯೆತ್ತದೆ ಇರುವುದಿರಂದ ಸ್ಯಾಂಡಲ್‌ವುಡ್ ಪ್ರಮುಖ ನಟರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧಿಕ್ಕಾರದ ಪೋಸ್ಟ್‌ಗಳು ಕಾಣುತ್ತಿವೆ.
ಈ ಹಿಂದೆ ಇದ್ದ ದಿವಂಗತ ನಟರಾದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಕಾವೇರಿ ತಂಟೆಗೆ ಬಂದರೆ ಎಚ್ಚರಿಕೆ ಕೊಡುತ್ತಿದ್ದರು. ಆದರೆ, ಈಗಿನ ನಟರ ಮೌನ ವಿಪರ್ಯಾಸವೇ ಸರಿ ಎಂಬಂತಹ ಪೋಸ್ಟ್‌ಗಳು ಫೇಸ್‌ಬುಕ್, ಟ್ವಿಟಟರ್, ಇನ್ಸ್‌ಸ್ಟಾಗ್ರಾಂಗಳಲ್ಲಿ ಕಂಡುಬರುತ್ತಿವೆ.
ನಟ ಶಿವರಾಜ್‌ಕುಮಾರ್, ಯಶ್, ದರ್ಶನ್, ಸುದೀಪ್ ಅವರ ಬಾಯಿಗೆ ಕಪ್ಪು ಪಟ್ಟಿ ಹಾಕಿರುವ ಫೋಟೋಗಳನ್ನು ಪ್ರಸ್ತುತ ನೆಟ್‌ನಲ್ಲಿ ಸದ್ದು ಮಾಡುತ್ತಿವೆ. ಇತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡಪರ ಸಂಘಟನೆಗಗಳು ಹಾಗೂ ಕನ್ನಡಿಗರ ರಕ್ಷಣಾ ವೇದಿಕೆ ಪ್ರತಿಭಟನೆ ಮಾಡುತ್ತಿವೆ. ನಮ್ಮ ರೈತರಿಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸದ ನಟರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.