ಹೊಸದಿಗಂತ ವರದಿ, ಹಾವೇರಿ:
ರೈಲ್ವೆ ಹಳಿ ಪಕ್ಕದಲ್ಲಿ ಹುಲ್ಲು ಮೇಯುತ್ತಿದ್ದ ಕುರಿಗಳ ಮೇಲೆ ರೈಲು ಹರಿದು ೨೦ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ಘಟನೆ ಸವಣೂರು ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಬುಧವಾರ ಸವಣೂರು ತಾಲೂಕಿನ ಹತ್ತಿಮತ್ತೂರು ತಾಂಡದ ರಮೇಶ ಲಮಾಣಿ ಎಂಬುವರು ಕುರಿ ಮೇಯಿಸಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರನಿಂದ ಹುಬ್ಬಳ್ಳಿಯತ್ತ ಈ ರೈಲು ಸಾಗುತ್ತಿತ್ತು. ಗಣೇಶನ ಹಬ್ಬದ ಬಳಿಕ ಬಳಿಕ ಬರುವ ಹಿರಿಯರ ಹಬ್ಬಕ್ಕೆ ಕುರಿಗಳಿಗೆ ಉತ್ತಮ ಬೆಲೆ ಬರುವ ನಿರೀಕ್ಷೆಯಲ್ಲಿದ್ದ ಕುರಿಯ ಮಾಲೀಕ ಈಗ ಕುರಿಗಳನ್ನು ಕಳೆದುಕೊಂಡು ಲಕ್ಷಾಂತರ ರೂ.ಗಳ ನಷ್ಟಕ್ಕೆ ತುತ್ತಾಗಿದ್ದಾನೆ.
ಘಟನಾ ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಕುರಿ ಕಳೆದುಕೊಂಡ ಮಾಲಿಕನಿಗೆ ಆತ್ಮಸ್ಥೈರ್ಯ ತುಂಬಿ ಸರಕಾರದಿಂದ ಸಿಗುವಂತ ಸೌಲಭ್ಯ ಕೊಡಿಸುವ ಭರವಸೆ ನೀಡಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.