Sunday, December 10, 2023

Latest Posts

ಸೆ. 21 ರಂದು ಈದ್ಗಾ ಮೈದಾನ ಗಣೇಶನ ವಿಸರ್ಜನೆ: ಅರವಿಂದ ಬೆಲ್ಲದ್

ಹೊಸದಿಗಂತ ವರದಿ, ಹುಬ್ಬಳ್ಳಿ:

ನಗರದ ರಾಣಿ ಚನ್ನಮ್ಮ ಮೈದಾನ(ಈದ್ಗಾ) ಗಣೇಶನ ವಿಸರ್ಜನಾ ಮೆರವಣಿಗೆ ಸೆ. ೨೧ರಂದು ನಡೆಲಿದ್ದು, ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಹಲವು ಜನಪ್ರತಿನಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೧೧.೪೫ ಗಂಟೆಗೆ ಮಹಾಪೂಜೆಯ ಬಳಿಕ ವಿಸರ್ಜನೆ ಮೆರವಣಿಗೆ ಆರಂಭವಾಗಲಿದೆ. ಆದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಮನವಿ ಮಾಡಿದ ಅವರು, ಇಲ್ಲಿಯ ಇಂದಿರಾ ಗಾಜಿನ ಮನೆಯ ಪಕ್ಕದ ಪಾಲಿಕೆ ಬಾವಿಯಲ್ಲಿ ವಿರ್ಸನೆ ಮಾಡಲಾಗುತ್ತದೆ ಎಂದರು.

ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು, ಸಾರ್ವಜನಿಕರು ಸೇರಿ ೪ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಹಿಂದೂ ವಿರೋ ಕಾಂಗ್ರೆಸ್ ಸರ್ಕಾರ ಮೈದಾನದಲ್ಲಿ ಗಣೇಶ ಮೂರ್ತಿ ಅನುಮತಿ ನೀಡದೆ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿತ್ತು. ಬಳಿಕ ಹೋರಾಟ ಮಾಡಿ ಅನಮತಿ ಪಡೆದವೂ ಎಂದ ತಿಳಿಸಿದರು.

ಚೈತ್ರಾ ಕುಂದಪುರ ಪ್ರಕರಣಕ್ಕೆ ಸಂಬಂಸಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರ ಜೊತೆ ಬಹಳಷ್ಟು ಜನರು ಫೋಟೋ ಹಾಗೂ ಸೆಲಿ ತೆಗೆದುಕೊಳ್ಳುತ್ತಾರೆ ಅವರೆಲ್ಲರೂ ಪರಿಚಯಸ್ಥರ ಎನ್ನಲಾಗುವುದಿಲ್ಲ. ಪಕ್ಷದ ಕಚೇರಿಗೂ ನೂರಾರು ಜನರು ಬರುತ್ತಾರೆ ಯಾರಾದರೂ ಅಲ್ಲಿಟ್ಟದ ಫೋನ್ ತೆಗೆದುಕೊಂಡು ಕರೆ ಮಾಡಿರಬಹುದು. ಅವಳಿಗೂ ಪಕ್ಷಕ್ಕೂ ಸಂಬಂಧವಿಲ್ಲ. ತನಿಖೆಯಿಂದ ಎಲ್ಲವೂ ತಿಳಿಯಲಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಗೂ ಮಹಿಳಾ ಮೀಸಲಾತಿಯ ಮಸೂದೆಗೂ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ಮಸುದೆ ಅಂಗೀಕಾರ ಚುನಾವಣೆ ಪೂರ್ವದಲ್ಲಿ ಆಗುವುದು ಅಸಾಧ್ಯ. ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳಲಿದೆ. ಕಾಂಗ್ರೆಸ್‌ನವರ ಅವಯಲ್ಲಿ ವೇದಕ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಕೇವಲ ಹೇಳಿದ್ದರು. ಆದರೆ ಪ್ರಧಾನಿ ಮೋದಿ ಅವರು ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಾಣಿ ಚನ್ನಮ್ಮ ಮೈದಾನ ಪಾಲಿಕೆಗೆ ಆಸ್ತಿಯಾಗಿದೆ. ಅಂಜುಮನ್ ಸಂಸ್ಥೆಗೆ ಅದರ ಮೇಲೆ ಯಾವುದೇ ಹಕ್ಕು ಇಲ್ಲ. ಕಳೆದ ಬಾರಿಯಂತೆ ಈ ಸಾರಿಯೂ ಕೋರ್ಟ್ ಹೋಗಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್‌ನವರು ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಪ್ರದೀಪ ಶೆಟ್ಟರ, ಪಾಲಿಕೆ ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಬಿಜೆಪಿ ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ರವಿ ನಾಯಕ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!