ಪ್ರಯಾಣಿಕರೇ ಗಮನಿಸಿ: ಇಂದು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚರಿಸುವುದಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಮ್ಮ ಮೆಟ್ರೋದ ಮಾರ್ಗ ಸುರಕ್ಷತಾ ಪರಿಶೀಲನೆ ಹಿನ್ನೆಲೆ ಇಂದು ಕೆ.ಆರ್ ಪುರದಿಂದ ಗರುಡಾಚಾರ್ ಪಾಳ್ಯ ನಿಲ್ದಾಣದವರೆಗೆ ನಮ್ಮ ಮೆಟ್ರೊ ರೈಲು ಸಂಚಾರವನ್ನು ರದ್ದುಗೊಳಿಸಿರುವುದಾಗಿ ಬಿಎಂಆರ್‌ಸಿಎಲ್‌ ಪ್ರಕಟಣೆ ನೀಡಿದೆ.

ಕೆ.ಆರ್.ಪುರದಿಂದ- ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ನಡುವೆ ಮೆಟ್ರೋ ಸುರಕ್ಷತಾ ಆಯುಕ್ತರು ಪರಿಶೀಲನೆ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಬದಲಾವಣೆ ಮಾಡಲಾಗಿದೆ. ಹಾಗಾಗಿ ಇಂದು ಇಡೀ ದಿನ ಕೆ.ಆರ್ ಪುರ ಹಾಗೂ ಗರುಡಾಚಾರ್ ಪಾಳ್ಯ ನಿಲ್ದಾಣದವರೆಗೆ ರೈಲು ಸೇವೆ ರದ್ದುಪಡಿಸಲಾಗಿದೆ.

ಬೈಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮಧ್ಯಾಹ್ನ 1.30 ರಿಂದ ಸಂಜೆ 4.30ರ ವರೆಗೆ ಮೆಟ್ರೊ ರೈಲು ಸೇವೆ ಇರುವುದಿಲ್ಲ. ವೈಟ್ ಫೀಲ್ಡ್ ಗರುಡಾಚಾರ್ ಪಾಳ್ಯದ ನಡುವೆ ಎಂದಿನಂತೆ ಮೆಟ್ರೊ ರೈಲುಗಳು ಸಂಚರಿಸಲಿವೆ. ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30 ರಿಂದ ಸಂಜೆ 4.30 ರವರೆಗೆ ರೈಲು ಸೇವೆ ಲಭ್ಯವಿರುತ್ತದೆ. ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಇರುವುದಿರಿಂದ ಪ್ರಯಾಣಿಕರು ಸಹಕರಿಸಬೇಕಾಗಿ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!