ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಪ್ರಯಾಣವೆಂದರೆ ಆರಾಮದಾಯಕವಾಗಿರುತ್ತದೆ ಎಂದು ಭಾವಿಸುವವರಿಗೆ ಈ ಘಟನೆ ಅಚ್ಚರಿ ಮೂಡಿಸಬಹುದು. ಕಾಂಗೋ ದೇಶದ ಮಣಿಮಾ ಪ್ರಾಂತ್ಯದ ಕಿಂದು ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯದ ಕೊರತೆಯಿಂದಾಗಿ ಪ್ರಯಾಣಿಕರು ವಿಮಾನದಿಂದ ನೇರವಾಗಿ ಕೆಳಕ್ಕೆ ಹಾರಿದ ಘಟನೆ ನಡೆದಿದೆ.
ಏನಿದು ಘಟನೆ?
‘ಏರ್ ಕಾಂಗೋ’ ಸಂಸ್ಥೆಗೆ ಸೇರಿದ ವಿಮಾನವೊಂದು ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ, ಪ್ರಯಾಣಿಕರು ಕೆಳಗಿಳಿಯಲು ಮೆಟ್ಟಿಲುಗಳ ವ್ಯವಸ್ಥೆಯೇ ಇರಲಿಲ್ಲ. ಗಂಟೆಗಟ್ಟಲೆ ವಿಮಾನದ ಒಳಗೇ ಕಾದು ಸುಸ್ತಾದ ಪ್ರಯಾಣಿಕರು, ಕೊನೆಗೆ ತಾಳ್ಮೆ ಕಳೆದುಕೊಂಡು ಸುಮಾರು 5 ರಿಂದ 6 ಅಡಿ ಎತ್ತರದಿಂದ ಕೆಳಕ್ಕೆ ಜಿಗಿದಿದ್ದಾರೆ.
ಸಣ್ಣ ವಿಮಾನ ನಿಲ್ದಾಣಗಳಲ್ಲಿ ತಾಂತ್ರಿಕ ಮತ್ತು ಮೂಲಸೌಕರ್ಯಗಳ ಕೊರತೆ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ವಿಮಾನಯಾನ ಸಂಸ್ಥೆಯು ಸಂಪರ್ಕ ವ್ಯವಸ್ಥೆ ಸುಧಾರಿಸಲು ಮುಂದಾಗಿದ್ದರೂ, ಕನಿಷ್ಠ ಸೌಲಭ್ಯಗಳಿಲ್ಲದೆ ಪ್ರಯಾಣಿಕರ ಸುರಕ್ಷತೆ ಈಗ ಪ್ರಶ್ನೆಯಾಗಿ ಉಳಿದಿದೆ.

