ಪರಪ್ಪನ ಅಗ್ರಹಾರದಲ್ಲಿ ಚೈತ್ರಾ ಟೀಮ್: ಜೈಲಾಧಿಕಾರಿ ನೀಡಿದ್ರು ಕೈದಿ ನಂಬರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ (Chaitra) ಟೀಮ್ ಇದೀಗ ಪರಪ್ಪನ ಅಗ್ರಹಾರದಲ್ಲಿದ್ದು,ಜೈಲಾಧಿಕಾರಿಗಳು ಆರೋಪಿಗಳಿಗೆ ಕೈದಿ ನಂಬರ್ ನೀಡಿದ್ದಾರೆ.

ಪ್ರಕರಣದ ಎ1 ಆರೋಪಿ ಚೈತ್ರಾಗೆ 9737 ನೇ ನಂಬರ್ ನೀಡಿದ್ದರೆ, ಇನ್ನುಳಿದ ಆರೋಪಿಗಳಾದ ಮೋಹನ್ ಕುಮಾರ್ ಕೈದಿ ನಂಬರ್ 9738, ರಮೇಶ್-9739 ಚೆನ್ನಾನಾಯ್ಕ-9740, ಧನರಾಜ್-9741 ಎಂದು ವಿಚಾರಣಾಧೀನ ನಂಬರ್ ನೀಡಲಾಗಿದೆ.

ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚನೆ ಕೇಸ್​ನಲ್ಲಿ ಸಿಲುಕಿದ್ದ ಚೈತ್ರಾ ಗ್ಯಾಂಗ್​ನ್ನ ಸಿಸಿಬಿ ಪೊಲೀಸರು 10 ದಿನಗಳಿಂದ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರು. ಆದ್ರೆ ನಿನ್ನೆ(ಸೆಪ್ಟೆಂಬರ್ 23) ಕಸ್ಟಡಿ ಅಂತ್ಯವಾಗಿದ್ದರಿಂದ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್​ಗೆ ವಂಚಕರ ಗ್ಯಾಂಗ್​ನ್ನ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದರು. ನ್ಯಾಯಾಲಯವೂ ಚೈತ್ರಾ ಹಾಗೂ ಆಕೆಯ ಗ್ಯಾಂಗ್​​ನ ಗಗನ್ ಕಡೂರ್, ಧನರಾಜ್, ರಮೇಶ್, ಶ್ರೀಕಾಂತ್ ಮತ್ತು ಚೆನ್ನನಾಯ್​​​​ಗೆ 14 ದಿನಗಳು ಅಂದ್ರೆ ಅಕ್ಟೋಬರ್​ 6 ರ ತನಕ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!