Sunday, December 10, 2023

Latest Posts

ಏಷ್ಯನ್ ಗೇಮ್ಸ್‌: ಹಾಕಿಯಲ್ಲಿ ಉಜ್ಬೇಕಿಸ್ತಾನ ಮಣಿಸಿ ಶುಭಾರಂಭ ಮಾಡಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ ಶುಭಾರಂಭ ಮಾಡಿದೆ. ಉಜ್ಬೇಕಿಸ್ತಾನ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ 16-0 ಅಂತರದಿಂದ ಆಮೋಘ ಗೆಲುವು ದಾಖಲಿಸಿದೆ.

ಪಂದ್ಯದ 7ನೇ ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿ ಲಲಿತ್ ಉಪಾಧ್ಯಾಯ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇನ್ನು 12ನೇ ನಿಮಿಷದಲ್ಲಿ ವರುಣ್ ಕುಮಾರ್ ಗೋಲು ಬಾರಿಸಿದರೆ, 17ನೇ ನಿಮಿಷದಲ್ಲಿ ಅಭಿಷೇಕ್ ಚೆಂಡನ್ನು ಗುರಿ ಮುಟ್ಟಿಸಿದರು.

ಮೊದಲ 17 ನಿಮಿಷದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತೀಯ ಆಟಗಾರರು ಆ ಬಳಿಕ ಗೋಲಿನ ಸುರಿಮಳೆಗೈದರು.
ಸದ್ಯ ವಿಶ್ವ ಹಾಕಿ ಶ್ರೇಯಾಂಕದಲ್ಲಿ 68ನೇ ಸ್ಥಾನದಲ್ಲಿರುವ ಉಜ್ಬೇಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಸೆಪ್ಟೆಂಬರ್ 26 ರಂದು ಸಿಂಗಾಪುರ ತಂಡವನ್ನು ಎದುರಿಸಲಿದೆ.

ಭಾರತವು ಪ್ರಸ್ತುತ ಪದಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಇಲ್ಲಿಯವರೆಗೆ ಒಟ್ಟು 5 ಪದಕಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 3 ಬೆಳ್ಳಿ ಪದಕಗಳು ಮತ್ತು 2 ಕಂಚಿನ ಪದಕಗಳು ಸೇರಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!