ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಯುವಜನತೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಿತ್ತಿದ್ದು, ಇದ್ದಕ್ಕಿದ್ದಂತೆ ಸಾವಿನ ಕೂಪಕ್ಕೆ ತುತ್ತಾಗುತ್ತಿದ್ದಾರೆ. ಗುಜರಾತ್ ರಾಜ್ಯದ ಜಾಮ್‌ನಗರದಲ್ಲೂ ಇಂಥದ್ದೇ ಘಟನೆ ನಡೆದಿದೆ. ಗರ್ಭಾ ಡ್ಯಾನ್ಸ್ ಮಾಡುತ್ತಿದ್ದ 19 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಜಾಮ್‌ನಗರದ 19 ವರ್ಷದ ವಿನೀತ್ ಮೆಹುಲ್‌ಭಾಯ್ ಕುನ್ವಾರಿಯಾ ಗರ್ಭಾ ನೃತ್ಯ ಅಭ್ಯಾಸ ಮಾಡುವಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು, ಅಷ್ಟರಲ್ಲಾಗಲೇ ವಿನೀತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಈ ಹಿಂದೆಯೂ ಗುಜರಾತ್‌ನ ಜುನಾಗಢ್‌ನಲ್ಲಿ ಚಿರಾಗ್ ಪರ್ಮಾರ್ ಎಂಬ 24 ವರ್ಷದ ಯುವಕನೂ ಕೂಡ ಗರ್ಭಾ ನೃತ್ಯ ಅಭ್ಯಾಸ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು.