‘ಹಸಿರು ಕ್ರಾಂತಿಯ ಪಿತಾಮಹ’, ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತವು ‘ಹಸಿರು ಕ್ರಾಂತಿಯ ಪಿತಾಮಹ’ ಎಂದು ಕರೆಯುವ ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ನಿಧನರಾಗಿದ್ದಾರೆ. ಇವರಿಗೆ 98ವರ್ಷ ವಯಸ್ಸಾಗಿದ್ದು, ಇಂದು ಬೆಳಗ್ಗೆ 11.20ಕ್ಕೆ ಚೆನ್ನೈನಲ್ಲಿ ಇಹಲೋಕ ತ್ಯಜಿಸಿದರು. ಸ್ವಾಮಿನಾಥನ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.

ಆಗಸ್ಟ್ 7, 1925 ರಂದು ಕುಂಭಕೋಣಂನಲ್ಲಿ ಮಂಕೊಂಬು ಸಾಂಬಶಿವನ್ ಸ್ವಾಮಿನಾಥನ್ ಜನಿಸಿದರು. 1943 ರಲ್ಲಿ ಬಂಗಾಳದಲ್ಲಿ ಕ್ಷಾಮವನ್ನು ಕಂಡ ಅವರು ವೈದ್ಯಕೀಯ ಶಿಕ್ಷಣದಿಂದ ಕೃಷಿಗೆ ಬದಲಾದರು. 1949 ರಲ್ಲಿ ಬಂಗಾಳದಲ್ಲಿ ಗೋಧಿ, ಅಕ್ಕಿ ಮತ್ತು ಸೆಣಬಿನ ಬಗ್ಗೆ ಸಂಶೋಧನೆ ಮಾಡುತ್ತಾ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸ್ವಾಮಿನಾಥನ್ ನಾರ್ಮನ್ ಬೋರ್ಲಾಗ್ ಮತ್ತು ಇತರ ವಿಜ್ಞಾನಿಗಳೊಂದಿಗೆ 1960ರ ದಶಕದಲ್ಲಿ ಭಾರತದಲ್ಲಿ ಆಹಾರ ಧಾನ್ಯದ ಕೊರತೆಯ ಸಂದರ್ಭದಲ್ಲಿ ಹೆಚ್ಚು ಇಳುವರಿ ನೀಡುವ ಅಕ್ಕಿ ತಳಿಯನ್ನು ಅಭಿವೃದ್ಧಿಪಡಿಸಿದರು.

Nobel laureate Norman Ernest Borlaug with MS Swaminathan. File/MSSRF

ಭಾರತದಲ್ಲಿ ಸಾಂಪ್ರದಾಯಿಕ ಕೃಷಿಯಿಂದ ಹೆಚ್ಚಿನ ಸುಧಾರಿತ ಬೀಜಗಳನ್ನು ಪರಿಚಯಿಸುವಲ್ಲಿ ಹೊಸ ವಿಧಾನಗಳನ್ನು ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಬದಲಾವಣೆಯು ಹಸಿರು ಕ್ರಾಂತಿಗೆ ಕಾರಣವಾಯಿತು. ಆದ್ದರಿಂದಲೇ ಸ್ವಾಮಿನಾಥನ್ ಅವರನ್ನು ‘ಹಸಿರು ಕ್ರಾಂತಿಯ ಪಿತಾಮಹ’ ಎಂದೂ ಕರೆಯುತ್ತಾರೆ.

ಕೃಷಿ ಸಂಶೋಧನಾ ಪ್ರಯೋಗಾಲಯಗಳಲ್ಲಿ ಸ್ವಾಮಿನಾಥನ್ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನಂತರ ಇಂಟರ್ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಡೈರೆಕ್ಟರ್ ಜನರಲ್ ಹಾಗೂ 1988 ರಲ್ಲಿ, ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಸ್ವಾಮಿನಾಥನ್‌ ಅವರಿಗೆ ಸಂದ ಪ್ರಶಸ್ತಿಗಳು

  • 1961 ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
  • 1986 ರಲ್ಲಿ ಆಲ್ಬರ್ಟ್ ಐನ್ಸ್ಟೈನ್ ವರ್ಲ್ಡ್ ಅವಾರ್ಡ್ ಆಫ್ ಸೈನ್ಸ್
  •  ಭಾರತ ಸರ್ಕಾರದಿಂದ 1967 ರಲ್ಲಿ ಪದ್ಮಶ್ರೀ
  • 1972 ರಲ್ಲಿ ಪದ್ಮಭೂಷಣ
  • 1989 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!