ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯ ನಟ ಟ್ರೆವರ್ ನೋವ ಬೆಂಗಳೂರು ಶೋ ರದ್ದಾಗಿದೆ. ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿಯ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾರ್ಯಕ್ರಮ ನಡೆಯಬೇಕಿದ್ದು, ತಾಂತ್ರಿಕ ಕಾರಣದಿಂದ ರದ್ದಾಗಿದೆ.
ಕಾರ್ಯಕ್ರಮದಲ್ಲಿ ಎಲ್ಲರಿಗೂ ನೋಹ್ ದನಿ ಕೇಳಿಸುತ್ತಿರಲ್ಲಿಲ್ಲ , ಸ್ಪಷ್ಟತೆ ಇಲ್ಲದ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಈ ಬಗ್ಗೆ ನೋವ ಪೋಸ್ಟ್ ಮಾಡಿದ್ದು, ಕಾರ್ಯಕ್ರಮದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದೆ. ಆದರೆ ತಾಂತ್ರಿಕ ಸಮಸ್ಯೆಗಳು ಎದುರಾಗಿದೆ. ಎಷ್ಟು ಪ್ರಯತ್ನಪಟ್ಟರೂ ಸರಿಯಾಗಿಲ್ಲ. ಈ ಕಾರಣದಿಂದ ಕಾರ್ಯಕ್ರಮ ರದ್ದು ಮಾಡಿದ್ದೇವೆ, ಟಿಕೆಟ್ ಹಣವನ್ನು ವಾಪಾಸ್ ಮಾಡುತ್ತೇವೆ ಎಂದಿದ್ದಾರೆ.