ಹೊಸದಿಗಂತ ವರದಿ ಮಡಿಕೇರಿ:
ಚಿರತೆ ದಾಳಿಗೆ ಕುರಿ ಬಲಿಯಾಗಿರುವ ಘಟನೆ ಮಾದಾಪುರ ಸಮೀಪದ ಗರಗಂದೂರಿನಲ್ಲಿ ನಡೆದಿದೆ.
ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ಬಳಿ ಶನಿವಾರ ತಡರಾತ್ರಿ ಚಿರತೆಯೊಂದು ಪ್ರತ್ಯಕ್ಷಗೊಂಡಿದ್ದು, ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಉಮ್ಮರ್ ಖಾನ್ ಅವರ ಕುರಿಯನ್ನು ಬಲಿ ತೆಗೆದುಕೊಂಡಿದೆ.
ಮನೆಯವರು ಮತ್ತು ಹಸುಗಳ ಬೊಬ್ಬೆಗೆ ಹೆದರಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.
ಚಿರತೆ ದಾಳಿಯಿಂದಾಗಿ ಸ್ಥಳೀಯರು ಮತ್ತು ವಸತಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.