ಉತ್ತರಾಖಂಡದಲ್ಲಿ ಭೂಕಂಪ: 48 ಗಂಟೆಗಳಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಾಖಂಡ್ ರಾಜ್ಯದಲ್ಲಿ 48 ಗಂಟೆಗಳಲ್ಲಿ ಎರಡನೇ ಭೂಕಂಪ ಸಂಭವಿಸಿದೆ. ಗುರುವಾರ ಮುಂಜಾನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

“ಗುರುವಾರ ಮುಂಜಾನೆ 3:49 ಕ್ಕೆ ಉತ್ತರಕಾಶಿ ನಗರದಲ್ಲಿ ಭೂಮಿಯ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ” ಎಂದು ನ್ಯಾಷನಲ್ ಸೆಂಟರ್ ಆಫ್ ಸಿಸ್ಮಾಲಜಿ ತಮ್ಮ ಟ್ವಿಟ್ಟರ್‌ ಪೋಸ್ಟ್‌ನಲ್ಲಿ ತಿಳಿಸಿದೆ. 48 ಗಂಟೆಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

ಮಂಗಳವಾರ ಪಿಥೋರಗಢದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಮೊನ್ನೆ ಒಂದೇ ದಿನ ನೇಪಾಳದಲ್ಲಿ ಸತತ ನಾಲ್ಕು ಭೂಕಂಪಗಳು ಸಂಭವಿಸಿದ್ದವು. ಅತ್ಯಂತ ಶಕ್ತಿಶಾಲಿ ಭೂಕಂಪದ ಕೇಂದ್ರಬಿಂದುವು ಉತ್ತರಾಖಂಡದ ಯಾತ್ರಾ ಪಟ್ಟಣವಾದ ಜೋಶಿಮಠದಿಂದ ಆಗ್ನೇಯಕ್ಕೆ 206 ಕಿಮೀ ಮತ್ತು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಉತ್ತರಕ್ಕೆ 284 ಕಿಮೀ ದೂರದಲ್ಲಿದೆ. ದೆಹಲಿ, ಎನ್‌ಸಿಆರ್, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಈ ಭೂಕಂಪನದ ಅನುಭವವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!