ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬೆನ್ನಲ್ಲೇ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರಾಜಕೀಯ ವೈರತ್ವ ಮರೆತು ಒಂದಾಗಿದ್ದಾರೆ.
ಸಂಧಾನ ಯಶಸ್ವಿಯಾದ ನಂತರ ಯೋಗೇಶ್ವರ್ ಅವರು ಎರೆಡೆರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ್ದಾರೆ.
ಮಾಗಡಿ ಮಾಜಿ ಶಾಸಕ ಮಂಜು ಮತ್ತು ರಾಮನಗರ ಜಿಲ್ಲಾ ಮುಖಂಡರು ಸೇರಿ ಸಂಧಾನ ಸಭೆ ನಡೆಸಿ ಇಬ್ಬರು ನಾಯಕರನ್ನು ಒಂದಾಗಿಸಿದ್ದಾರೆ. ಇದರ ಬೆನ್ನಲ್ಲೇ ಎರಡನೇ ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಯೋಗೇಶ್ವರ್ ,ಕುಮಾರಸ್ವಾಮಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಯೋಗೇಶ್ವರ್ ಅವರು ಜೆಡಿಎಸ್ ಜೊತೆ ಒಟ್ಟಾಗಿ ಹೋದರೆ ಗೆಲ್ಲುವ ಅವಕಾಶ ಹೆಚ್ಚಿದೆ. ಇದೇ ಕಾರಣಕ್ಕೆ ಜೆಡಿಎಸ್ ಜೊತೆ ಮುನಿಸು ಬಿಟ್ಟು ಕೈಜೋಡಿಸಿದ್ದಾರೆ.