ಬೇಕಾಗುವ ಸಾಮಗ್ರಿಗಳು:
* ಅನ್ನ
* ಪಾಲಾಕ್ ಸೊಪ್ಪು
* ಈರುಳ್ಳಿ
* ಹಸಿರು ಮೆಣಸಿನಕಾಯಿ
* ಚಕ್ಕೆ
* ಕರಿಮೆಣಸು
* ಸಾಸಿವೆ
* ಜೀರಿಗೆ
* ಲವಂಗ
* ಗೋಡಂಬಿ
* ಉಪ್ಪು
* ಎಣ್ಣೆ,
* ನಿಂಬೆಹಣ್ಣು
ಪಾಲಾಕ್ ರೈಸ್ ಮಾಡುವ ವಿಧಾನ:
* ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ. ಅದಕ್ಕೆ ಸಾಸಿವೆ, ಜೀರಿಗೆ, ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ ಹಾಕಿ ಕೆಲವು ನಿಮಿಷ ಬಾಡಿಸಿ. ನಂತರ ಕತ್ತರಿಸಿಕೊಂಡ ಪಾಲಾಕ್ ಸೊಪ್ಪನ್ನು ಅದಕ್ಕೆ ಹಾಕಿ ಬೇಯಿಸಿ.
* ಇದಕ್ಕೆ ನೀರು ಹಾಕಿ ಕುದಿಸಿ.
* ನಂತರ ಲವಂಗ, ಚಕ್ಕೆ, ಕರಿಮೆಣಸು ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಂಡು ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆಗೆ ಹಾಕಿ ಹುರಿಯಬೇಕು.
* ಪಾಲಾಕ್ ಮಿಶ್ರಣದೊಂದಿಗೆ ರುಬ್ಬಿದ ಮಿಶ್ರಣವನ್ನು ಬೆರೆಸಿ ಅಗತ್ಯವಿದ್ದರೆ ಉಪ್ಪು ಬೆರೆಸಿ ಚೆನ್ನಾಗಿ ತಿರುಗಿಸಿ ತಣ್ಣಗಾಗಲು ಬಿಡಿ.
* ಈ ಪಾಲಾಕ್ ಮಸಾಲೆಯೊಂದಿಗೆ ಅನ್ನ ಬೆರೆಸಿ ನಿಂಬೆ ರಸವನ್ನು ಇದರ ಮೇಲೆ ಹಿಂಡಿ ಚೆನ್ನಾಗಿ ಕಲೆಸಬೇಕು. ಈಗ ರುಚಿ ಜೊತೆಗೆ ಆರೋಗ್ಯಕರವಾದ ಪಾಲಕ್ ರೈಸ್ ಸವಿಯಲು ಸಿದ್ಧ.