ಹೊಸದಿಗಂತ ವರದಿ, ಉಡುಪಿ:
ದೀಪಾವಳಿ, ನವರಾತ್ರಿ ಹಬ್ಬಗಳು ಹಿಂದೂಗಳ ಸಂಸ್ಕೃತಿ ಮತ್ತು ಸಂಸ್ಕಾರವಾಗಿದೆ. ಅಸುರ ಮನೋಭಾವನೆಯನ್ನು ನಿಗ್ರಹಿಸುವ ದೃಷ್ಟಿಕೋನದಿಂದ ನವರಾತ್ರಿ ಆಚರಿಸುತ್ತೇವೆ. ಆದರೆ ಉಡುಪಿಯಲ್ಲಿ ಮಹಿಷಾ ದಸಾರವನ್ನು ಆಚರಿಸಲು ಬಿಡುವುದಿಲ್ಲ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳ ಸಂಯೋಜಕ ಸುನೀಲ್ ಕೆ.ಆರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಕೆಲವು ನಗರ ನಕ್ಸಲರು ಸೇರಿಕೊಂಡು ಮಹಿಷಾ ದಸರಾ ನಡೆಸಲು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಅಸುರ ಭಾವನೆಯನ್ನು ಬೆಳೆಸಬೇಕು, ಮಹಿಷಾಸುರನನ್ನು ವೈಭವೀಕರಿಸಬೇಕು ಎಂಬ ಮನಸ್ಥಿತಿಯವರಿಂದ ಹಿಂದು ಸಮಾಜಕ್ಕೆ ನೋವಾಗಿದೆ ಎಂದರು.
ಜಿಲ್ಲಾಡಳಿತ, ಸರಕಾರ, ಪೋಲಿಸ್ ಇಲಾಖೆ ಮಹಿಷಾ ದಸರಾಕ್ಕೆ ಅನುಮತಿಯನ್ನು ನೀಡಬಾರದು. ಇದನ್ನು ಮೀರಿ ಮಹಿಷಾ ದಸರಾ ನಡೆಯುತ್ತದೆ ಎಂದಾದರೇ ಅದನ್ನು ನಡೆಯಲು ಬಜರಂಗದಳ ಬಿಡುವುದಿಲ್ಲ. ಸಮಸ್ತ ಹಿಂದೂ ಭಾಂದವರು ಮಹಿಷಾ ದಸರಾವನ್ನು ವಿರೋಧಿಸಬೇಕೆಂದು ಕರೆ ನೀಡಿದರು.