ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಸೀಸನ್ 10 (Bigg Boss Kannada) ಇಂದಿನಿಂದ ಶುರುವಾಗಿದೆ. ಬಿಗ್ ಬಾಸ್ ಮನೆಯನ್ನು ಪರಿಚಯಿಸುವ ಮೂಲಕ ಸುದೀಪ್ (Sudeep) ಸೀಸನ್ ಅನ್ನು ಶುರು ಮಾಡಿದರು.
ಪ್ರತಿ ಬಾರಿಯೂ ವಾಹಿನಿಯು ಆಯ್ಕೆ ಮಾಡಿದ ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಕರೆಯಿಸಿಕೊಂಡು ಅವರೊಂದಿಗೆ ಮಾತುಕತೆಯಾಡಿ, ಆನಂತರ ದೊಡ್ಮನೆ ಒಳಗೆ ಕಳುಹಿಸಿ ಕೊಡುವುದು ವಾಡಿಕೆಯಾಗಿತ್ತು. ಆದರೆ, ಈ ಬಾರಿ ವಿಭಿನ್ನ ರೀತಿಯಲ್ಲಿ ಸ್ಪರ್ಧಿಗಳನ್ನು ಕಳುಹಿಸಿಕೊಡುವ ಕುರಿತು ಮಾತನಾಡಿದರು.
ಹಿಂದಿನ ಸೀಸನ್ ಗಳಲ್ಲಿ ವಿನ್ ಆದಂತಹ ನಟಿ ಶ್ರುತಿ (Shruti), ಪ್ರಥಮ್ (Pratham) , ಚಂದನ್ ಶೆಟ್ಟಿ (Chandan Shetty) ಮತ್ತು ಮಂಜು ಪಾವಡ (Manju Pavagad)ಈ ನಾಲ್ವರನ್ನು ವೇದಿಕೆಯ ಮೇಲೆ ಕರೆದು, ವೇದಿಕೆಗೆ ಬರುವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಬೇಕೋ ಅಥವಾ ಬೇಡವೋ ಎಂದು ವೋಟು ಮಾಡಲು ತಿಳಿಸಿದರು. ಈ ನಾಲ್ವರು ವೋಟ್ ಮಾಡಿದ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ಸುದೀಪ್ ಪ್ರಕಟಿಸಿ ಶಾಕ್ ನೀಡಿದ್ದಾರೆ.
ಸದ್ಯ ಈ ನಾಲ್ವರು ನಿರ್ಣಾಕರ ಸ್ಥಾನದಲ್ಲಿ ಕುಳಿತುಕೊಂಡು ಸ್ಪರ್ಧಿಗಳನ್ನು ಎದುರು ನೋಡುತ್ತಿದ್ದಾರೆ.
ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ ಎಂಟ್ರಿ
ಕಿರುತೆರೆಯ ಖ್ಯಾತ ನಟಿ ನಮ್ರತಾ ಗೌಡ (Namrata Gowda), ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ನಾಗಿಣಿ 2 ಧಾರಾವಾಹಿ ಮೂಲಕ ಫೇಮಸ್ ಆದ ನಟಿ ಇವರು. ತಂದೆ, ತಾಯಿ ಮತ್ತು ಕುಟುಂಬ ಈ ಸಂದರ್ಭದಲ್ಲಿ ಹಾಜರಿತ್ತು. ತಾವು ಯಾಕೆ ಬಿಗ್ ಬಾಸ್ ಮನೆಗೆ ಹೋಗಲು ಬಂದೆ ಎನ್ನುವ ಕುರಿತು ನಮ್ರತಾ ಗೌಡ ಮಾತನಾಡಿದರು. ನಿರ್ಣಾಯಕರಾದ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಒಟ್ಟಾರೆ ಶೇಕಡಾ 86ರಷ್ಟು ವೋಟ್ ಪಡೆದುಕೊಂಡು ಆಯ್ಕೆಯಾದರು.
ಮೊದಲ ಕಂಟೆಸ್ಟೆಂಟ್ ಆಗಿರುವುದರಿಂದ ಬಿಗ್ ಬಾಸ್ ಮನೆಯಲ್ಲಿ ಹಾಲು ಉಕ್ಕಿಸುವಂತೆ ಹೇಳಿದರು. ನಮತ್ರಾ ಮನೆಯೊಳಗೆ ಕಾಲಿಟ್ಟು ಹಾಲು ಉಕ್ಕಿಸುವ ಮೂಲಕ ಹೊಸ ಮನೆಯನ್ನು ಪ್ರವೇಶ ಮಾಡಿದ್ದಾರೆ. ‘ಊರಿಗೊಬ್ಬಳೆ ಪದ್ಮಾವತಿ’ ಹಾಡಿನ ಮೂಲಕ ವೇದಿಕೆಗೆ ಬಂದ ನಮ್ರತಾ, ಹಲವಾರು ವಿಚಾರಗಳನ್ನು ಹಂಚಿಕೊಂಡರು.