ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜನಪ್ರತಿನಿಧಿಯೊಬ್ಬರು ಬಿಗ್ಬಾಸ್ ಮನೆಗೆ ತೆರಳಿದ್ದಾರೆ. ಜನರು ಎಷ್ಟು ಉತ್ಸುಕರಾಗಿದ್ದಾರೋ ಅಷ್ಟೇ ಮಂದಿ ಬಿಗ್ಬಾಸ್ಗೆ ತೆರಳಬಾರದಿತ್ತು ಎನ್ನುತ್ತಿದ್ದಾರೆ.
ಶಾಸಕರೆಲ್ಲ ಬಿಗ್ಬಾಸ್ಗೆ ಹೋಗೋಕೆ ಶುರುವಾದ್ರೆ ಅಭಿವೃದ್ಧಿ ಕೆಲಸ ಮಾಡೋದ್ಯಾರು? ನಾವು ವೋಟ್ ಮಾಡಿದ್ದು ಮನರಂಜನೆ ನೀಡಲಿ ಅಂತಲ್ಲ, ಅಭಿವೃದ್ಧಿಗಾಗಿ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.
ತಿಂಗಳುಗಳೇ ಪ್ರದೀಪ್ ಬಿಗ್ಬಾಸ್ ಮನೆಯಲ್ಲಿ ಇರಬಹುದು ಆಗ ಕ್ಷೇತ್ರದ ಕೆಲಸ ಯಾರು ಮಾಡ್ತಾರೆ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಸಾಕಷ್ಟು ಪ್ರಗತಿಪರ ಕೆಲಸಗಳಿಗೆ ಇವರ ಸಹಿ ಬೇಕಿರುತ್ತದೆ. ಇವರಿಗಾಗಿ ಕೆಲಸ ಮುಂದೂಡಬೇಕಾಗುತ್ತದೆ ಎನ್ನುವುದು ಜನರ ಅಭಿಪ್ರಾಯ.