ದೀರ್ಘಾಯುಷಿಗಳಾಗಬೇಕಾ? ದೀರ್ಘಾವಧಿಯ ಆಯಸ್ಸು ನಿಮ್ಮದಾಗೋ ಸೀಕ್ರೆಟ್ ಏನು ಗೊತ್ತಾ? ಆರೋಗ್ಯವಾಗಿರಬೇಕು, ದೇಹದ ಆರೋಗ್ಯವನ್ನು ಚೆನ್ನಾಗಿ ಇಟ್ಕೋಬೇಕಷ್ಟೆ. ಹೇಗೆ ಅಂತೀರಾ ನೋಡಿ..
- ಓಡಾಡಿ, ಒಂದೇ ಕಡೆ ನಿಲ್ಲಬೇಡಿ, ಒಂದೇ ಕಡೆ ಕೂರಬೇಡಿ.
- ಆರೋಗ್ಯಕರ ಆಹಾರ ಸೇವಿಸಿ, ಪ್ರತೀ ಬಾರಿ ನಿಮ್ಮ ತಟ್ಟೆಯಲ್ಲಿ ಏನೆಲ್ಲಾ ಇದೆ ಎನ್ನುವ ಪರಿಜ್ಞಾನ ಇರಲಿ.
- ನಿಮ್ಮ ದೇಹ ಏನು ಹೇಳುತ್ತಿದೆ, ಏನು ಕೇಳುತ್ತಿದೆ ಎನ್ನುವ ಬಗ್ಗೆ ಗಮನ ಇರಲಿ
- ತೂಕ, ಶೇಪ್ ಎರಡೂ ಹಿಡಿತದಲ್ಲಿರಲಿ.
- ಟೊಬ್ಯಾಕೊ ಸೇವನೆಯಿಂದ ದೂರವಿರಿ
- ನಿಮ್ಮ ಮೆದುಳಿಗೆ ಕೆಲಸ ಕೊಡಿ, ಹೊಸ ಕೆಲಸಗಳನ್ನು ಮಾಡಿ
- ನಿಮ್ಮ ದೇಹಕ್ಕೆ ನಿಮ್ಮ ಮನಸ್ಸಿಗೆ ಸದಾ ಬದ್ಧರಾಗಿರಿ, ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ.
- ಆಗಾಗ ಮೆಡಿಕಲ್ ಚೆಕಪ್ ಮಾಡಿಸಿ
- ಮದ್ಯಪಾನ ಬಿಟ್ಟುಬಿಡಿ, ಆಗದೇ ಹೋದರೆ ಕಡಿಮೆ ಮಾಡಿ.
- ಪ್ರತಿದಿನ ವ್ಯಾಯಾಮ, ಯೋಗ, ಜಿಮ್, ಡ್ಯಾನ್ಸ್ ಯಾವುದಾದರೊಂದು ಚಟುವಟಿಕೆ ರೂಢಿ ಮಾಡಿ
- ಉತ್ತಮವಾದ ನಿದ್ದೆಯ ಅಭ್ಯಾಸ ಮಾಡಿ
- ಸಕಾರಾತ್ಮಕವಾದ ಜನರಿಂದ ಸುತ್ತುವರಿಯುವುದು, ಸಕಾರಾತ್ಮಕ ನಿಲುವುಗಳನ್ನ ತೆಗೆದುಕೊಳ್ಳುವುದು ಮುಖ್ಯ