ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ನೀಡಲು ಸೆಸ್ಕಾಂ ಎಂಡಿ ನಕಾರ: ರೈತರಿಂದ ಮುಂದುವರಿದ ಆಹೋರಾತ್ರಿ ಧರಣಿ

ಹೊಸದಿಗಂತ ವರದಿ,ಚಾಮರಾಜನಗರ:

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತವಾಗಿ 7 ಗಂಟೆ ವಿದ್ಯುತ್ ಪೊರೈಕೆ ಮಾಡಲು ಸೆಸ್ಕಾಂ ಎಂಡಿ ಶ್ರೀಧರ್ ಹಾಗೂ ಜಿಲ್ಲಾಡಳಿತ ರೈತರಿಗೆ ಭರವಸೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಮುಖಂಡರು ಜಿಲ್ಲಾಡಳಿತ ಭವನ ಮುಂದೆ ಅಹೋರಾತ್ರಿ ಧರಣಿ ಆರಂಭಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಂದೆ ಶಾಮಿಯಾನ ಹಾಕಿ ಧರಣಿ ಆರಂಭಿಸಿದ ರೈತರು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸೆಸ್ಕಾಂ ವಿಭಾಗೀಯ ಅಧಿಕಾರಿಗಳು ಧರಣಿ ಸ್ಥಳಕ್ಕಾಗಮಿಸಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ನುಡಿದಂತೆ ನಿರಂತರ 7 ಗಂಟೆ ವಿದ್ಯುತ್ ಪೊರೈಕೆ ಮಾಡುತ್ತೇವೆ ಎಂದು ಲಿಖಿತವಾಗಿ ಬರೆದುಕೊಡುವವರೆಗೆ ಧರಣಿ ವಾಪಸ್ ಪಡೆಯುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಆರಂಭಿಸಿದರು.
ಇದಕ್ಕು ಮುನ್ನಾ ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕರ ಅಭಿಯಂತರರ ಕಚೇರಿ ಮುಂದೆ ರೈತರ ಸಂಘಟನೆಗಳು ಪ್ರತಿಭಟನೆ ನಡೆಸಿ, ಕಚೇರಿಯ ಮುತ್ತಿಗೆ ಹಾಕಿ ಬೆಳಗ್ಗೆ ಪ್ರತಿಭಟನೆ ಆರಂಭಿಸಿದ್ದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸತತವಾಗಿ 7 ಗಂಟೆಗೆ ವಿದ್ಯುತ್ ನೀಡಲು ಆಗದಿದ್ದರೆ ರೈತರ ಜೊತೆ ಚಳುವಳಿಯಲ್ಲಿ ಭಾಗವಹಿಸಿ, ಸರ್ಕಾರ ಮಧ್ಯ ಪ್ರವೇಶ ಮಾಡಲಿ ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ಕೃಷಿ ಪಂಪ್‌ಸೆಟ್‌ಗಳಿದ್ದು, ಈ ಪಂಪ್‌ಸೆಟ್‌ಗಳಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಾಳೆ ತೆಂಗು .ಕಬ್ಬು ತರಕಾರಿ ಅರಿಶಿನ, ಜೋಳ, ರಾಗಿ ಇತರೆ ಫಸಲುಗಳನ್ನು ಬೆಳೆಯುತ್ತಿದ್ದಾರೆ. ಇವುಗಳಿಗೆ ಕೃಷಿ ಪಂಪ್‌ಸೆಟ್‌ಗಳಿoದ ನೀರಿನ ಲಭ್ಯತೆ ಇದೆ. ಅದರೆ ಸರ್ಕಾರ ಏಕಾಏಕಿ ವಿದ್ಯುತ್ ಅನ್ನು ಕಡಿತ ಮಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ರೈತ ಕೃಷಿ ಪಂಪ್‌ಸೆಟ್‌ಗಳಿಗೆ 10 ಗಂಟೆಗೆ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿ ಈಗ ವಚನ ಭ್ರಷ್ಟವಾಗಿದೆ ಎಂದು ದೂರಿದರು.
ಆದ್ದರಿಂದ ಸರ್ಕಾರ ಸಮರ್ಪಕವಾಗಿ ಕೃಷಿಗೆ ವಿದ್ಯುತ್ ನೀಡಬೇಕು ಹಾಗೂ ಕೃಷಿ ಪಂಷ ಕೆಳಗೆ ಆಧಾರ್ ಲಿಂಕ್ ಮಾಡುವುದನ್ನು ಕೈಬಿಡಬೇಕು. ನೂತನ ಕೃಷಿ ಪಂಸೆಟ್ ನೊಂದಾವಣಿಗೆ ಅವಕಾಶ ನೀಡಬೇಕು. ಬೆಂಕಿಗೆ ಆಹುತಿಯಾದಂತಹ ಕಬ್ಬಿಗೆ ವೈಜ್ಞಾನಿಕ ಹಾಗೂ . ಬೆಳೆ ನಷ್ಟವನ್ನು ತಕ್ಷಣ ನೀಡಬೇಕು ಎಂದು ಮಾತನಾಡಿದರು.
ಬಳಿಕ ಸೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್, ಸೂಪರ್‌ಡೆಂಟ್ ಇಂಜಿನಿಯರ್ ಸೋಮಶೇಖರ್ ಅವರು ಮೈಸೂರಿನಿಂದ ಮಧ್ಯಾಹ್ನ್ 3 ಂಗಟೆಗೆ ಆಗಮಿಸುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟು ಜಿಲ್ಲಾಡಳಿತ ಭವನಕ್ಕೆ ರೈತ ಮುಖಂಡರು ತೆರೆಳೀದರು.
ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್, ಕಾರ್ಯಪಾಲಕ ಅಭಿಯಂತರ ವಸಂತಕುಮಾರ್, ಎಇಇ ರಾಜು ಅವರು ಧರಣಿನಿರತ ರೈತರ ಮನವೊಲಿಸುವಲ್ಲಿ ವಿಫಲರಾದರು. ಧರಣಿ ಮುಂದುರಿಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಮಹೇಶ್ ಪ್ರಭು, ಮಹೇಶ್‌ಕುಮಾರ್,ಕಾಳನಹುಂಡಿ ಗುರುಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ ಹಾಲಿನ ನಾಗರಾಜ್ ಕಾರ್ಯಾಧ್ಯಕ್ಷ ಮಲಿಯೂರು ಹರ್ಷ, ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷಮಂಜುನಾಥ್ ಮಲೆಯೂರು ಗ್ರಾಮ ಘಟಕದ ಅಧ್ಯಕ್ಷ ಬಸವರಾಜಪ್ಪ ಮಹೇಂದ್ರ ಸತೀಶ್ ಕಾಳಪ್ಪ ಮಹೇಶ್ ಕೃಷ್ಣ ಉಡಿಗಾಲ ಮಾದೇವಸ್ವಾಮಿ ಗುರುಮಲ್ಲಪ್ಪ ಗುರುಸಿದ್ದಪ್ಪ ಮಾದೇಶ್ ಸಿದ್ದೇಶ್ ಸಿದ್ದಲಿಂಗಪ್ಪ ಮಹೇಶ್ ಮಲ್ಲಪ್ಪ ಪ್ರಕಾಶ್ ನಾಗಣ್ಣ ರಾಜಣ್ಣ ಸುಧಾಕರ ರಘು ನಾಗು ಸುರೇಶ್ ಶೇಖರ್ ಹರಳಿಕಟ್ಟೆ ಪ್ರಭುಸ್ವಾಮಿ ಮಾದೇವಪ್ಪ ಗುರುಸಿದ್ದಪ್ಪ ಸಿದ್ದಲಿಂಗಪ್ಪ ರಾಮಸಮುದ್ರ ಮಂಜು ಹಾಗೂ ಜಿಲ್ಲೆಯ ವ್ಯಾಪ್ತಿಯ ರೈತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!