ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ತಾನದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದದ ವೇಳೆ ರಾಹುಲ್ ಗಾಂಧಿಗೆ ಮದುವೆ ವಿಷಯ ಎದುರಾಗಿದೆ. ಈ ವೇಳೆ ಕಾಂಗ್ರೆಸ್ ನಾಯಕ ಮುಗುಳುನಗೆಯೊಂದಿಗೆ ಉತ್ತರಿಸಿದ್ದಾರೆ.
ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ರಾಹುಲ್ ಗಾಂಧಿಯವರಿಗೆ ಅವರ ನೆಚ್ಚಿನ ಆಹಾರ, ತ್ವಚೆಯ ಆರೈಕೆ ಮತ್ತು ಅವರ ಮದುವೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿದರು.
ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದದ ವೀಡಿಯೊವನ್ನು ಇಂದು ಅವರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಒಬ್ಬ ವಿದ್ಯಾರ್ಥಿಯು 53 ವರ್ಷ ವಯಸ್ಸಿನ ರಾಹುಲ್ ಗಾಂಧಿ ಅವರನ್ನು ತಾವು ನೋಡಲು ಚೆನ್ನಾಗಿದ್ದೀರಿ, ನೀವು ತುಂಬಾ ಸ್ಮಾರ್ಟ್ ಮತ್ತು ಸುಂದರವಾಗಿದ್ದೀರಿ ಆದರೆ ಇನ್ನೂ ಏಕೆ ಮದುವೆಯಾಗಿಲ್ಲ ಎಂದು ಕೇಳಿದರು.
ಪ್ರಶ್ನೆಗೆ ತಕ್ಷಣ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಅವರು ತಮ್ಮ ಕೆಲಸ ಮತ್ತು ಪಕ್ಷದ ಕೆಲಸದಲ್ಲಿ ಮಗ್ನರಾಗಿರುವ ಕಾರಣ ಅವರು ಬ್ರಹ್ಮಚಾರಿಯಾಗಿ ಉಳಿದಿದ್ದೇನೆ. ನಾನು ನನ್ನ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು.
ಆದರೂ ರಾಹುಲ್ ಗಾಂಧಿಯವರು ತಮ್ಮ ಮದುವೆಯ ಬಗ್ಗೆ ಆಗಾಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿದ್ದರು.
ಈ ಹಿಂದೆ 2018 ರಲ್ಲಿ ರಾಹುಲ್ ಗಾಂಧಿಯವರನ್ನು ಮದುವೆಯಾಗುವ ಯೋಜನೆಗಳ ಬಗ್ಗೆ ಕೇಳಿದ್ದಾಗ ಅವರು ತಮ್ಮ ಪಕ್ಷವನ್ನು ಮದುವೆಯಾಗಿದ್ದಾಗಿ ಹೇಳಿದ್ದರು.
ತಮ್ಮ ತ್ವಚೆಯ ಆರೈಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ರಾಹುಲ್ ಗಾಂಧಿ ಅವರು ಎಂದಿಗೂ ಮುಖದ ಮೇಲೆ ಕ್ರೀಮ್ ಅಥವಾ ಸೋಪ್ ಅನ್ನು ಬಳಸುವುದಿಲ್ಲ ಬದಲಾಗಿ ನೀರಿನಿಂದ ಮಾತ್ರ ಮುಖ ತೊಳೆಯುತ್ತೇನೆ. ನಾನು ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತೇನೆ ಎಂದು ಅವರು ತಮ್ಮ ನೆಚ್ಚಿನ ವಿಷಯಗಳ ಬಗ್ಗೆ ಕೇಳಿದಾಗ ಹೇಳಿದರು.