ಹೊಸದಿಗಂತ ವರದಿ ಹಾಸನ :
ಹಾಸನ ಜಿಲ್ಲೆಯ ಆಲೂರು ಬಳಿ ಗಾಯಗೊಂಡಿದ್ದ ಆನೆ (ಭೀಮ)ಗೆ ಅರೆವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಆನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದ ಶಾರ್ಪ್ ಶೂಟರ್ ಎಚ್.ಎಚ್. ವೆಂಕಟೇಶ್ ಅವರ ಪುತ್ರ ಮೋಹಿತ್ ಮತ್ತು ಮಿಥುನ್ ಅವರಿಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ೧೦ಲಕ್ಷ ರೂಪಾಯಿಗಳ (ಹೆಚ್ಚುವರಿ ಮೊತ್ತ)ದ ಪರಿಹಾರದ ಚೆಕ್ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸಚಿವರುಗಳಾದ ಮಧು ಬಂಗಾರಪ್ಪ, ಮಾಂಕಾಳ ವೈದ್ಯ ಮತ್ತಿತರರು ಹಾಜರಿದ್ದರು. ನಿಯಮಾನುಸಾರ ಈಗಾಗಲೇ ಮೃತ ವೆಂಕಟೇಶ್ ಅವರು ಪತ್ನಿ ಜಿ.ಎಸ್. ಮಂಜುಳಾ ಅವರಿಗೆ ಅರಣ್ಯ ಸಚಿವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದ ವೇಳೆ ೧೫ಲಕ್ಷ ರೂ. ಚೆಕ್ ವಿತರಿಸಿದ್ದರು