SHOCKING VIDEO| ಕಾರು ಕಳ್ಳರನ್ನು ತಡೆಯಲು ಮುಂದಾದ ಚಾಲಕನಿಗೆ ಖದೀಮರು ಮಾಡಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳ್ಳತನ ತಡೆಯಲು ಮುಂದಾದ ಚಾಲಕನನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಭಯಾನಕ ಘಟನೆ ದೆಹಲಿಯ ಮಹಿಪಾಲ್‌ಪುರ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, 43 ವರ್ಷದ ಕ್ಯಾಬ್ ಚಾಲಕ ಬಿಜೇಂದ್ರ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.

ವಿವರಕ್ಕೆ ಹೋದರೆ.. ಫರಿದಾಬಾದ್ ಮೂಲದ ಬಿಜೇಂದ್ರ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಮಹಿಪಾಲ್‌ಪುರ ಪ್ರದೇಶದಲ್ಲಿ ತನ್ನ ಟ್ಯಾಕ್ಸಿಯನ್ನು ಓಡಿಸುತ್ತಿದ್ದಾಗ ದರೋಡೆಕೋರರ ಗುಂಪು ಅವರ ವಾಹನವನ್ನು ಕದಿಯಲು ಪ್ರಯತ್ನಿಸಿದೆ. ಕಳ್ಳತನ ವಿರೋಧಿಸಿದಾಗ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಗ್ಯಾಂಗ್ ಟ್ಯಾಕ್ಸಿಗೆ ಡಿಕ್ಕಿ ಹೊಡೆದು 200 ಮೀಟರ್‌ಗೂ ಎಳೆದೊಯ್ದಿದ್ದಾರೆ.

ಮಂಗಳವಾರ ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದ್ದು, ಚಾಲಕನ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಿತಿ ಚಿಂತಾಜನಕವಾಗಿತ್ತು. ಇದೀಗ ಚಾಲಕ ಗಂಭೀರ ಗಾಯಗಳಿಂದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಕೊಲೆ ಮತ್ತು ಸಾಕ್ಷ್ಯ ನಾಶ ಆರೋಪದಡಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಆರು ತಂಡಗಳೊಂದಿಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!